Friday, June 5, 2026
Homeಅಪರಾಧಸುಳ್ಯ: ದಿನಸಿ ಅಂಗಡಿ ಶೆಡ್ ನಲ್ಲಿ ಅಕ್ರಮ ಮದ್ಯ ದಾಸ್ತಾನು!

ಸುಳ್ಯ: ದಿನಸಿ ಅಂಗಡಿ ಶೆಡ್ ನಲ್ಲಿ ಅಕ್ರಮ ಮದ್ಯ ದಾಸ್ತಾನು!

- Advertisement -
- Advertisement -

ಸುಳ್ಯ: ದಿನಸಿ ಅಂಗಡಿಯ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ತಾಲೂಕಿನ ಅಲೆಟ್ಟಿ ಗ್ರಾಮದ ಬಡ್ಡಡ್ಕ ಎಂಬಲ್ಲ ನಡೆದಿದೆ.

ಭುವನೇಶ್ವರ ಎಂಬವರಿಗೆ ಸೇರಿದ ಅಂಗಡಿಯೊಂದರಲ್ಲಿ ಮದ್ಯ ಪತ್ತೆಯಾಗಿದೆ. ಸುಮಾರು ನಾಲ್ಕು ಪೆಟ್ಟಿಗೆಯಲ್ಲಿ ಮೈಸೂರು ಲೆನ್ಸರ್ ವಿಸ್ಕಿ ಒಟ್ಟು 42 ಪ್ಯಾಕೆಟ್, ವರ್ಜಿನಲ್ ಚಾಯ್ಸ್ ವಿಸ್ಕಿ 48 ಟೆಟ್ರಾ ಪ್ಯಾಕೆಟ್ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 13 ಸಾವಿರ ಎಂದು ಅಂದಾಜಿಸಲಾಗಿದೆ. ಸದ್ಯ ಕಾರ್ಯಾಚರಣೆ ವೇಳೆ ಆರೋಪಿ ಪರಾರಿಯಾಗಿದ್ದು, ಪುತ್ತೂರು ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಅವರ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

- Advertisement -

Latest News

error: Content is protected !!