Sunday, June 7, 2026
Homeಅಪರಾಧಕಡಬ: ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಅಪರಿಚಿತ ವ್ಯಕ್ತಿ!

ಕಡಬ: ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಅಪರಿಚಿತ ವ್ಯಕ್ತಿ!

- Advertisement -
- Advertisement -

ಕಡಬ: ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯತ್ತ ಬಂದಿದ್ದು ತಕ್ಷಣ ಎಚ್ಚೆತ್ತ ಬಾಲಕಿ ಓಡಿ ಹೋಗಿ ಆತನಿಂದ ತಪ್ಪಿಸಿಕೊಂಡ ಘಟನೆ ಕೊಡಿಂಬಳ ಗ್ರಾಮದ ಮಡ್ಯಡ್ಕ ಸಮೀಪ ಮಂಗಳವಾರದಂದು ಸಂಜೆ ಸಂಭವಿಸಿದೆ.

ವಿದ್ಯಾರ್ಥಿನಿಯು ಕಡಬ ಸರಸ್ವತಿ ಶಾಲೆಯ 9ನೇ ತರಗತಿ ಕಲಿಯುತ್ತಿದ್ದು, ಕೋಡಿಂಬಾಳದಿಂದ ಮಡ್ಯಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಉಂಡಿಲ ಕ್ರಾಸ್ ಬಳಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಕಾರನ್ನು ಹಠಾತ್ತನೆ ನಿಲ್ಲಿಸಿ ಬಾಲಕಿಯತ್ತ ಬಂದಿದ್ದ. ಬಾಲಕಿ ಹೆದರಿ ಓಡಲಾರಂಭಿಸಿದ್ದಾಳೆ. ಅಷ್ಟಾಗಿಯೂ ಅಪರಿಚಿತ ವ್ಯಕ್ತಿ ಸ್ವಲ್ಪ ದೂರ ಆಕೆಯನ್ನು ಹಿಂಬಾಲಿಸಿ ಕಲ್ಲನ್ನು ಎಸೆಯಲು ಪ್ರಯತ್ನಿಸಿದ್ದ ಬಳಿಕ ಕಾರು ಹತ್ತಿ ಹೋಗಿದ್ದಾನೆ ಎಂದು ಬಾಲಕಿ ವಿವರಿಸಿದ್ದಾಳೆ. ಬಾಲಕಿ ತಂದೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!