Tuesday, June 9, 2026
Homeಕರಾವಳಿಉಡುಪಿಕಾರ್ಕಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!

ಕಾರ್ಕಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!

- Advertisement -
- Advertisement -

ಕಾರ್ಕಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಿಟ್ಟೆ ಗ್ರಾಮದ ಮಜಾಲು ಮನೆ ನಿವಾಸಿ ಶ್ಯಾಮ್ ಕೋಟ್ಯಾನ್ (65) ಅವರ ಮೃತದೇಹ ಗುರುವಾರ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಪಟ್ಟದ ಬಳಿಯ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ.

ಶ್ಯಾಮ್ ಕೋಟ್ಯಾನ್‌ರವರ ಮಗಳು ಅಖಿಲಾ ಅಜೆಕಾರು ದೂರು ದಾಖಲಿಸಿದ್ದು, ಶವಾಗಾರದಲ್ಲಿರಿಸಿದ ಮೃತದೇಹವನ್ನು ತನ್ನ ತಂದೆಯದೇ ಎಂದು ಗುರುತಿಸಿದ್ದಾರೆ ಎಂದು ಹೇಳಲಾಗಿದೆ.

ಸೋಮವಾರ ಬೆಳಿಗ್ಗೆ ಮನೆಯಿಂದ ಹೋದವರು ವಾಪಸ್ ಬಾರದೆ ಇದ್ದುದ್ದನ್ನು ಕಂಡು ಮನೆಯವರು ಕಾಣೆಯಾಗಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಗುರುವಾರ ಅವರ ಮೃತದೇಹ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಪಟ್ಟಣ ಬಸದಿಯ ಬಳಿ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ.ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!