Saturday, June 6, 2026
Homeಕರಾವಳಿಉಡುಪಿ'ಪ್ರಾರ್ಥನೆಗೆ ತೆರಳಿದವರ ಮೇಲೆ ದಾಳಿ ಖಂಡನೀಯ': ವೆರೋನಿಕಾ ಕರ್ನೆಲಿಯೋ

‘ಪ್ರಾರ್ಥನೆಗೆ ತೆರಳಿದವರ ಮೇಲೆ ದಾಳಿ ಖಂಡನೀಯ’: ವೆರೋನಿಕಾ ಕರ್ನೆಲಿಯೋ

- Advertisement -
- Advertisement -

ಉಡುಪಿ: ಕಾರ್ಕಳದಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ದಾಂಧಲೆ ಎಬ್ಬಿಸಿರುವುದು ಖಂಡನೀಯ. ಪ್ರಾರ್ಥನೆಗೆ ತೆರಳಿದವರ ಮೇಲೆ ದಾಳಿ ನಡೆಸುವ ಬದಲು ಅವರ ಮನವೊಲಿಸಿ ಸಮಸ್ಯೆ ಅರಿಯುವ ಕೆಲಸ ಮಾಡಬೇಕಿತ್ತು ಎಂದು ಕ್ರೈಸ್ತ ನಾಯಕಿ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ನೇರವಾಗಿ ಹೋಗಿ ದಾಳಿ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಾರ್ಥನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಎಲ್ಲ ಧರ್ಮದವರ ಪ್ರಾರ್ಥನೆ ಎಲ್ಲ ಕಡೆಯಲ್ಲೂ ನಡೆಯುತ್ತಿದ್ದು ಕೊನೆಯಲ್ಲಿ ಪ್ರತಿಯೊಬ್ಬರು ಆರಾಧಿಸುವುದು ದೇವರನ್ನು. ಒಂದು ವೇಳೆ ಪ್ರಾರ್ಥನೆಗೆ ಅನ್ಯಧರ್ಮದವರು ತೆರಳಿದ್ದರೆ ಅದನ್ನು ತಡೆಯಲು ಬೇರೆ ಮಾರ್ಗವನ್ನು ಅನುಸರಿಸಬಹುದಿತ್ತು. ಹೀಗೆ ಮಹಿಳೆಯರು, ಮಕ್ಕಳು ಸೇರಿದ ಸಮಯದಲ್ಲಿ ಹೋಗಿ ದಾಳಿ ಮಾಡಿ ಏನೂ ಕೂಡ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!