Thursday, June 4, 2026
Homeಅಪರಾಧಕೊಕ್ಕಡ: ಕಿಡಿಗೇಡಿಗಳ ಗುಂಡೇಟಿಗೆ ಸಾಕುಎಮ್ಮೆ ಬಲಿ

ಕೊಕ್ಕಡ: ಕಿಡಿಗೇಡಿಗಳ ಗುಂಡೇಟಿಗೆ ಸಾಕುಎಮ್ಮೆ ಬಲಿ

- Advertisement -
- Advertisement -

ಕೊಕ್ಕಡ: ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅರಸಿನಮಕ್ಕಿಯ ಹೊಸ್ತೋಟ ಎಂಬಲ್ಲಿ ನಡೆದಿದೆ.

ಅರೇಕಲ್ ಮಹದೇವ್ ಭಟ್ ಎಂಬವರ ಹಾಲು ಕರೆಯುವ ಎಮ್ಮೆಯನ್ನು ಮನೆಯ ಪರಿಸರದಲ್ಲಿ ಮೇಯಲು ಬಿಟ್ಟಿದ್ದರು. ಎಮ್ಮೆ ತಡರಾತ್ರಿವರೆಗೂ ಮನೆಗೆ ಬಾರದಿರುವುದನ್ನು ಗಮನಿಸಿದ ಮನೆಯವರು ಹುಡುಕಲು ಪ್ರಾರಂಭಿಸಿದ್ದಾರೆ. ಭಾರಿ ಹುಡುಕಾಟದ ನಂತರ ಅರಸಿನಮಕ್ಕಿ ಫಲಸ್ತಡ್ಕ ಬಳಿಯ ಕಾಡು ಪ್ರದೇಶದಲ್ಲಿ ಎಮ್ಮೆಯ ಮೃತದೇಹ ಪತ್ತೆಯಾಗಿದೆ.

ಕಿಡಿಗೇಡಿಗಳ ಗುಂಡಿಗೆ ಬಲಿಯಾಗಿರುವ ಶಂಕೆ
ಮನೆಯ ದಾರಿ ತಪ್ಪಿ ಅಲೆದಾಡುತ್ತಿದ್ದ ಎಮ್ಮೆಯನ್ನು ಕಾಡೆಮ್ಮೆ ಎಂದು ಭಾವಿಸಿ ಬೇಟೆಗಾರರು ಗುಂಡು ಹಾರಿಸಿರಬಹುದು ಎಂದು ಶಂಕಿಸಲಾಗಿದೆ. ಹಾಗೆಯೆ ‘ಈ ಎಮ್ಮೆಯನ್ನು ಬಿಡಬೇಡಿ. ಇದು ನಮ್ಮ ಬೆಳೆಗೆ ಹಾನಿ ಮಾಡುತ್ತಿದೆ. ಇನ್ನು ಬಿಟ್ಟರೆ ಇದನ್ನು ಗುಂಡು ಹಾರಿಸಿ ಕೊಲ್ಲಬೇಕಾಗುತ್ತದೆ’ ಎಂದು ಕೆಲ ಸ್ಥಳೀಯರು ಈ ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ.

ಅರೇಕಲ್ ಮಹದೇವ್ ಭಟ್ ರ ಕುಟುಂಬದವರು ಬಹಳ ಪ್ರೀತಿಯಿಂದ ಸಾಕಿದ್ದ ಎಮ್ಮೆಯನ್ನು ರಾಕ್ಷಸಿಪ್ರವೃತ್ತಿಯ ದುಷ್ಕರ್ಮಿಗಳು ಕೊಂದಿರುವುದು ನಿಜಕ್ಕೂ ಅರೇಕಲ್ ಮನೆಯಲ್ಲಿ ಸೂತಕದ ಛಾಯೆ ಮೂಡಿಸಿದೆ.

- Advertisement -

Latest News

error: Content is protected !!