Saturday, October 17, 2026
Homeಕರಾವಳಿಉಳ್ಳಾಲ: ಕೈ ಕಾಲು ತೊಳೆಯಲು ನೀರಿಗಿಳಿದವ ಕೆರೆಪಾಲು!

ಉಳ್ಳಾಲ: ಕೈ ಕಾಲು ತೊಳೆಯಲು ನೀರಿಗಿಳಿದವ ಕೆರೆಪಾಲು!

- Advertisement -
- Advertisement -

ಉಳ್ಳಾಲ: ಕೂಲಿ ಕಾರ್ಮಿಕನೊಬ್ಬ ಕೆರೆಯಲ್ಲಿ ಕೈ ಕಾಲು ತೊಳೆಯುತ್ತಿದ್ದ ವೇಳೆ ಆಯಾ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಜ್ಜಿ ನಡ್ಕ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಮೃತ ಕೂಲಿ ಕಾರ್ಮಿಕರನ್ನು ತೂಮಿನಾಡು ನಿವಾಸಿ ಇಬ್ರಾಹಿಂ (30) ಎಂದು ಗುರುತಿಸಲಾಗಿದೆ. ಅವರು ಇನ್ನಿಬ್ಬರು ಕೂಲಿ ಕಾರ್ಮಿಕರ ಜೊತೆ ಮನೆಯೊಂದರ ಫೌಂಡೇಶನ್ ಕೆಲಸಕಕ್ಕೆಂದು ಅಜ್ಜಿನಡ್ಕಕ್ಕೆ ಬಂದಿದ್ದು, ಕೆಲಸ ಮುಗಿಸಿ ಕೈ ಕಾಲು ತೊಳೆಯಲೆಂದು ಸೋಮವಾರ ಕೆರೆಗೆ ಹೋಗಿದ್ದರು. ಈ ವೇಳೆ ಆಯಾ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!