Thursday, June 25, 2026
Homeಕರಾವಳಿಉಪ್ಪಿನಂಗಡಿ: ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

ಉಪ್ಪಿನಂಗಡಿ: ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

- Advertisement -
- Advertisement -

ಉಪ್ಪಿನಂಗಡಿ: ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಪೊಯ್ಯೆ ಎಂಬಲ್ಲಿ ನಡೆದಿದೆ.

ನಾಣ್ಯಪ್ಪ ಪೂಜಾರಿ (54) ಮೃತ ದುರ್ದೈವಿ. ತನ್ನ ಮನೆಯ ಬಳಿ ಇದ್ದ ತೆಂಗಿನ ಮರದ ಬುಡಕ್ಕೆ ಸೊಪ್ಪು ಹಾಕಲೆಂದು ಮನೆ ಸಮೀಪದ ತೋಡನ್ನು ದಾಟಿ ಹೋಗುವಾಗ ತೋಡಿನಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ತಿಳಿಯದೇ ಸ್ಪರ್ಶಿಸಿದ್ದಾರೆ. ಪರಿಣಾಮವಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ, ಒರ್ವ ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!