Wednesday, June 3, 2026
Homeಅಪರಾಧಉಡುಪಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಪೋಕ್ಸೋ ಕಾಯ್ದೆಯಡಿ ವೃದ್ಧನ...

ಉಡುಪಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಪೋಕ್ಸೋ ಕಾಯ್ದೆಯಡಿ ವೃದ್ಧನ ಬಂಧನ

- Advertisement -
- Advertisement -

ಉಡುಪಿ: ಅಪ್ರಾಪ್ತ  ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಉಡುಪಿಯಲ್ಲಿ ವೃದ್ಧನೊಬ್ಬನನ್ನು ಪೊಕ್ಸೋ ಕಾಯಿಡೆಯಡಿ ಪೊಲೀಸರು ಬಂಧಿಸಿದ್ದಾರೆ.

ಅನಂತ ಸೇರೆಗಾರ್(65) ಬಂಧಿತ ಆರೋಪಿ. ಈತ 11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಕುರಿತು ಮಕ್ಕಳ ಸಹಾಯ ವಾಣಿಗೆ ಮಾಹಿತಿ ಬಂದಿತ್ತು, ಈ ವಿಚಾರವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸಲಾಗಿತ್ತು. ಅದರಂತೆ ತಕ್ಷಣ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತರಾದ ಯೋಗೀಶ್ ಮತ್ತು ಸುರಕ್ಷಾ ಜೊತೆ ಬಾಲಕಿಯ ಮನೆಗೆ ಭೇಟಿ ನೀಡಿ ಸಮಾಲೋಚನೆ ಮಾಡಿದ್ದಾರೆ.

ಈ ಘಟನೆಯ ಬಗ್ಗೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರ ದೂರಿನಂತೆ ಮಹಿಳಾ ಠಾಣೆಯಲ್ಲಿ ವೃತ್ತ ನಿರೀಕ್ಷಕರಾದ ಜಯಂತ್ ಎಂ. ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕಿ ವೈಲೆಟ್ ಫೆಮಿನಾ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳಾ ಠಾಣಾ ಸಿಬ್ಬಂದಿಯಾದ ಅಶೋಕ್ ಮತ್ತು ಜ್ಯೋತಿ ನಾಯಕ್ ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

- Advertisement -

Latest News

error: Content is protected !!