Thursday, June 25, 2026
Homeಅಪರಾಧಮಂಗಳೂರಿನಲ್ಲಿ ಕಾರಿನ ಗಾಜು ಒಡೆದು ಲ್ಯಾಪ್ ಟಾಪ್, ಐಫೋನ್ ಕಳವು

ಮಂಗಳೂರಿನಲ್ಲಿ ಕಾರಿನ ಗಾಜು ಒಡೆದು ಲ್ಯಾಪ್ ಟಾಪ್, ಐಫೋನ್ ಕಳವು

- Advertisement -
- Advertisement -

ಮಂಗಳೂರು: ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್, ಐಪೋನ್ ಮತ್ತು ವಿವಿಧ ಬ್ಯಾಂಕ್‌ಗಳ ಚೆಕ್ ಹಾಳೆಗಳನ್ನು ಕಳವು ಮಾಡಿರುವ ಘಟನೆ ನಿನ್ನೆ ಮಧ್ಯಾಹ್ನ ಉರ್ವಸ್ಟೋರ್ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ನಡೆದಿದೆ.

ನಗರದ ಕಂಪೆನಿಯೊಂದರ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಮಧ್ಯಾಹ್ನ 12 ಗಂಟೆಯ ವೇಳೆಗೆ ಕಾರಿನ ಗ್ಲಾಸ್ ಲಾಕ್ ಮಾಡಿ ಕಾರನ್ನು ಮುಡಾ ಕಚೇರಿ ಎದುರು ಪಾರ್ಕ್ ಮಾಡಿದ್ದರು. ಹೊಟೇಲ್‌ಗೆ ಹೋಗಿ ಮಧ್ಯಾಹ್ನ 12:25ರ ವೇಳೆಗೆ ವಾಪಸ್ಸಾಗಿದ್ದಾರೆ.  ಆಗ ಕಾರಿನ ಹಿಂಭಾಗದ ಡೋರ್‌ನ ಗ್ಲಾಸ್‌ನ್ನು ಒಡೆದು ಕಾರಿನಲ್ಲಿದ್ದ ಬ್ಯಾಗ್, ಅದರಲ್ಲಿದ್ದ ಲ್ಯಾಪ್‌ಟಾಪ್, ಐ-ಫೋನ್ ಸೇರಿದಂತೆ ಅಂದಾಜು 1 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ  ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!