Thursday, June 4, 2026
Homeತಾಜಾ ಸುದ್ದಿದನಗಳನ್ನು ಕದ್ದು ತೂಫಾನ್ ಗೆ ತುಂಬಿಸುವಾಗ ಪೊಲೀಸ್ ದಾಳಿ; ವಾಹನ ಸಮೇತ ಇರ್ಫಾನ್ ಅರೆಸ್ಟ್

ದನಗಳನ್ನು ಕದ್ದು ತೂಫಾನ್ ಗೆ ತುಂಬಿಸುವಾಗ ಪೊಲೀಸ್ ದಾಳಿ; ವಾಹನ ಸಮೇತ ಇರ್ಫಾನ್ ಅರೆಸ್ಟ್

- Advertisement -
- Advertisement -

ಚಿಕ್ಕಮಗಳೂರು: ರಸ್ತೆಯ ಆಸುಪಾಸಿನಲ್ಲಿ ಮಲಗಿದ್ದ ದನಗಳನ್ನು ತೂಫಾನ್ ವಾಹನಕ್ಕೆ ಬಲವಂತವಾಗಿ ತುಂಬಿಸುತ್ತಿದ್ದ ವೇಳೆಯಲ್ಲಿ ನಡೆದ ಪೊಲೀಸ್ ದಾಳಿಯಲ್ಲಿ ಒಬ್ಬನನ್ನು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ಫಾನ್ ಅಲಿಯನ್ನು ಮತ್ತು ಕೃತ್ಯಕ್ಕೆ ಬಳಸಿಕೊಂಡಿದ್ದ ತೂಫಾನ್ ವಾಹನವನ್ನು ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಪರಾರಿಯಾಗಿರುವ ಮತ್ತೊಬ್ಬ ಜೀಶಾನ್ ಎಂದು ತಿಳಿದುಬಂದಿದೆ.

ಬಣಕಲ್ ಠಾಣಾ ವ್ಯಾಪ್ತಿಯ ಬಿನ್ನಡಿ ಗ್ರಾಮದ ಬಳಿ ರಸ್ತೆಯಲ್ಲಿ ಮಲಗಿದ್ದ ಹಸುಗಳನ್ನು ಕದ್ದೊಯ್ದು ಮಾಂಸ ಮಾಡುವ ಸಲುವಾಗಿ ಇಬ್ಬರು ಆರೋಪಿಗಳು ಬಂದಿದ್ದರು. ಎಂದಿನಂತೆ ರಾತ್ರಿಯ ವೇಳೆಯಲ್ಲಿ ಪೊಲೀಸ್ ವಾಹನ ಗಸ್ತು ತಿರುಗುವ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಕಂಡ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುವ ವೇಳೆ ಒಬ್ಬ ಆರೋಪಿ ಜೀಶಾನ್ ಪರಾರಿಯಾಗಿದ್ದಾನೆ. ಇನ್ನೊಬ್ಬ ಆರೋಪಿ ಇರ್ಫಾನ್ ಅಲಿ ಪೊಲೀಸರ ಅತಿಥಿಯಾಗಿದ್ದಾನೆ

ಈ ಹಿಂದೆಯೂ ಕೂಡ ಇದೇ ರೀತಿಯಾಗಿ ಯಾರ ಭಯವೂ ಇಲ್ಲದೆ ಮೂಕ ಪ್ರಾಣಿಗಳನ್ನು ಮಾಂಸಕ್ಕಾಗಿ ಕದ್ದೊಯ್ಯುವ ಅಮಾನವೀಯ ಕೃತ್ಯಗಳು ಮಲೆನಾಡಿನಲ್ಲಿ ನಡೆಯುತ್ತಲೇ ಇತ್ತು ಇದೀಗ ಪೊಲೀಸರು ಗಸ್ತು ತಿರುಗುವ ವೇಳೆಯಲ್ಲಿ ಅಪರಾಧಿಗಳನ್ನು ಬಂಧಿಸಿರುವುದು ಪ್ರಶಂಸನೀಯವಾಗಿದೆ.

- Advertisement -

Latest News

error: Content is protected !!