Thursday, July 3, 2025
HomeUncategorizedಜಮ್ಮು ಕಾಶ್ಮೀರ ಎನ್ಕೌಂಟರ್ ;ಐವರು ಉಗ್ರರ ಹತ್ಯೆಗೈದ ಭದ್ರತಾ ಪಡೆಗಳು!!

ಜಮ್ಮು ಕಾಶ್ಮೀರ ಎನ್ಕೌಂಟರ್ ;ಐವರು ಉಗ್ರರ ಹತ್ಯೆಗೈದ ಭದ್ರತಾ ಪಡೆಗಳು!!

spot_img
- Advertisement -
- Advertisement -

ಪುಲ್ವಾಮಾ: ಪುಲ್ವಾಮಾದ ಪುಚಾಲ್​ನಲ್ಲಿ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆದಿದ್ದು, 24 ಗಂಟೆಯಲ್ಲಿ ಐವರು ಉಗ್ರರ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.

ಕುಲ್ಗಾಮ್ ನ ಜೊದಾರ್ ಪ್ರದೇಶದಲ್ಲಿ ಉಗ್ರರಿರುವ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿತ್ತು. ಉಗ್ರರು ಸೇನೆಯೆಡೆಗೆ ಗುಂಡು ಹಾರಿಸಿದ ಬಳಿಕ ಪ್ರತಿದಾಳಿ ನಡೆಸಿದ ಸೇನೆ, ಇಬ್ಬರು ಲಷ್ಕರ್ ಎ ತೋಯ್ಬಾ ಉಗ್ರರನ್ನು ಹತ್ಯೆ ಮಾಡಿದೆ.

ಪುಲ್ವಾಮಾದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮತ್ತೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಹಂದ್ವಾರದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಹತ್ಯೆಯಾದ ಉಗ್ರನನ್ನು ಹಿಜ್ಬುಲ್ ಉಗ್ರ ಸಂಘಟನೆಯ ಮೆಹ್ರಾಜುದ್ದೀನ್ ಹಲ್ವಾಯಿ ಅಲಿಯಾಸ್ ಉಬೈದ್ ಎಂದು ಗುರುತಿಸಲಾಗಿದೆ.

ಭದ್ರತಾ ಪಡೆಗಳಲ್ಲಿ ಯಾರಿಗೂ ಪ್ರಾಣ ಹಾನಿ ಆಗಿಲ್ಲ, ಇದು ಅಭಿನಂದನಾರ್ಹ ಎಂದು ಕಾಶ್ಮೀರ ವಲಯದ ಐಜಿ ವಿಜಯ್​ಕುಮಾರ್​ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!