Monday, August 31, 2026
Homeಕರಾವಳಿಬಂಟ್ವಾಳ: ಮನೆಯ ಮೇಲೆ ಹಿಟಾಚಿ ಸಹಿತ ಟಿಪ್ಪರ್ ಪಲ್ಟಿ, ಓರ್ವನ ಸ್ಥಿತಿ ಗಂಭೀರ

ಬಂಟ್ವಾಳ: ಮನೆಯ ಮೇಲೆ ಹಿಟಾಚಿ ಸಹಿತ ಟಿಪ್ಪರ್ ಪಲ್ಟಿ, ಓರ್ವನ ಸ್ಥಿತಿ ಗಂಭೀರ

- Advertisement -
- Advertisement -

ಬಂಟ್ವಾಳ: ಅಮ್ಟಾಡಿಯ ಕೆಂಪುಗುಡ್ಡೆ ಕ್ರಾಸ್ ಬಳಿ ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ವಾಹನವೊಂದು ಹಿಟಾಚಿ ಸಹಿತ ಮನೆಯ ಮೇಲೆ ಬಿದ್ದು ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ.

ಟಿಪ್ಪರ್ ನಲ್ಲಿದ್ದ ವಿಠಲ್ ಅವರು ಗಾಯಗೊಂಡು ಅಡಿಗೆ ಸಿಲುಕಿದ್ದು, ಬಿ.ಸಿ.ರೋಡಿನ ವಿಜಯಲಕ್ಷ್ಮಿ ಕ್ರೇನ್ ತಕ್ಷಣ ಸ್ಥಳಕ್ಕೆ ತೆರಳಿ ಟಿಪ್ಪರನ್ನು ಮೇಲಕ್ಕೆತ್ತಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಯಲ್ಲಿ ನಾರಾಯಣ ಭಂಡಾರಿ ಅವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆ ಮಂದಿಗೆ ಹಾನಿಯಾಗಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

- Advertisement -

Latest News

error: Content is protected !!