Thursday, June 4, 2026
HomeUncategorizedದುಬೈನ ಅಲಿ ಬಂದರಿನಲ್ಲಿ ಭಾರಿ ಸ್ಫೋಟ!!

ದುಬೈನ ಅಲಿ ಬಂದರಿನಲ್ಲಿ ಭಾರಿ ಸ್ಫೋಟ!!

- Advertisement -
- Advertisement -

ದುಬೈ: ಲಂಗರು ಹಾಕಿದ್ದ ಹಡಗಿನೊಳಗಿನ ಕಂಟೇನರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡ ಘಟನೆ ದುಬೈನ ಜೆಬೆಲ್ ಅಲಿ ಬಂದರಿನಲ್ಲಿ ನಡೆದಿದೆ.

ಜೆಬೆಲ್ ಅಲಿ ಬಂದರಿನ ಹಡಗಿನಲ್ಲಿದ್ದ ಕಂಟೇನರ್ ಒಳಗೆ ಸ್ಫೋಟದಿಂದ ಉಂಟಾದ ಬೆಂಕಿಯನ್ನು ಸದ್ಯ ನಿಯಂತ್ರಣಕ್ಕೆ ತರಲಾಗಿದ್ದು, ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ದುಬೈ ಮೀಡಿಯಾ ಆಫೀಸ್ (ಡಿಎಂಒ) ಟ್ವಿಟರ್‌ನಲ್ಲಿ ತಿಳಿಸಿದೆ.

ಸ್ಪೋಟದ ತೀವ್ರತೆಗೆ ಬಂದರಿನಿಂದ 25 ಕಿಮಿ ದೂರದಲ್ಲಿರುವ ಕಟ್ಟಡಗಳು ಹಾಗೂ ಕಿಟಕಿಗಳು ಅಲುಗಾಡಿದ್ದು, ಸ್ಪೋಟಕ್ಕೆ ಅಸಲಿ ಕಾರಣವೇನೆಂದು ತಿಳಿದು ಬಂದಿಲ್ಲ.

ದುಬೈನ ಉತ್ತರ ತುದಿಯಲ್ಲಿರುವ ಜೆಬೆಲ್ ಅಲಿ ಬಂದರು ವಿಶ್ವದ ಅತಿದೊಡ್ಡ ಆಳವಾದ ನೀರಿನ ಬಂದರಾಗಿದ್ದು, ಭಾರತೀಯ ಉಪಖಂಡ, ಆಫ್ರಿಕಾ ಮತ್ತು ಏಷ್ಯಾದಿಂದ ಸರಕುಗಳನ್ನು ಒದಗಿಸುತ್ತದೆ.

- Advertisement -

Latest News

error: Content is protected !!