Thursday, June 4, 2026
Homeಕ್ರೀಡೆಬರ್ತಡೇ ದಿನ ಎಂ.ಎಸ್. ಧೋನಿ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬರ್ತಡೇ ದಿನ ಎಂ.ಎಸ್. ಧೋನಿ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್

- Advertisement -
- Advertisement -

ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನಿನ್ನೆ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಅವರ ಹೊಸ ಲುಕ್‌ನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧೋನಿ ವೃತ್ತಿಜೀವನದ ಆರಂಭದಿಂದಲೂ ವಿವಿಧ ಕೇಶ ವಿನ್ಯಾಸದ ಮೂಲಕ ಗಮನಸೆಳೆದವರು. ಇದೀಗ 40ನೇ ಜನ್ಮದಿನದಂದು ಅವರು ಬಿಳಿ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. 2 ವಾರದ ಹಿಂದೆ ಅವರು ಉದ್ದ ಮೀಸೆಯ ಲುಕ್‌ನೊಂದಿಗೆ ಮಿಂಚಿದ್ದರು. ಇದೀಗ ಕಪ್ಪು-ಬಿಳುಪಿನ ಲುಕ್ ಅಭಿಮಾನಿಗಳಿಗೆ ಮತ್ತಷ್ಟು ಅಚ್ಚರಿ ತಂದಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿರುವ ಧೋನಿ, ಸದ್ಯ ರಾಂಚಿಯ ಮನೆಯಲ್ಲಿ ಪತ್ನಿ ಸಾಕ್ಷಿ ಮತ್ತು ಪುತ್ರಿ ಝಿವಾ ಜತೆಗೆ ಕಾಲ ಕಳೆಯುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಐಪಿಎಲ್ 14ನೇ ಆವೃತ್ತಿ ಯುಎಇಯಲ್ಲಿ ಪುನರಾರಂಭಗೊಂಡಾಗ ಧೋನಿ ಚೆನ್ನೈ ಸೂಪರ್‌ಕಿಂಗ್ಸ್ ನಾಯಕರಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ. 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ನಾಯಕ ಧೋನಿ, ಭಾರತ ಪರ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯ ಆಡಿದ್ದು, ಒಟ್ಟು 15 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.

- Advertisement -

Latest News

error: Content is protected !!