Friday, June 5, 2026
Homeಕರಾವಳಿಕಡಬದ ದೋಳ್ಪಾಡಿಯಲ್ಲಿ ಅವಿವಾಹಿತ ಮಹಿಳೆ ನಾಪತ್ತೆ

ಕಡಬದ ದೋಳ್ಪಾಡಿಯಲ್ಲಿ ಅವಿವಾಹಿತ ಮಹಿಳೆ ನಾಪತ್ತೆ

- Advertisement -
- Advertisement -

ಕಡಬ : ಅವಿವಾಹಿತ ಮಹಿಳೆಯೋರ್ವರು ಏಕಾಏಕಿ ಮನೆಯಿಂದ ನಾಪತ್ತೆಯಾದ ಘಟನೆ ಕಡಬ ತಾಲೂಕಿನ ದೋಳ್ಪಾಡಿಯಲ್ಲಿ ನಡೆದಿದೆ.

ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕೂರೇಳು ಪಚ್ಚೋಳಿ ಎಂಬವರ ಪುತ್ರಿ ಲಲಿತಾ(30 ನಾಪತ್ತೆಯಾದ ಮಹಿಳೆ. ಲಲಿತಾ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದರೆನ್ನಲಾಗಿದೆ. ಜೂನ್ 29ರಂದು ಸಹೋದರ ಹಾಗೂ ಅವರ ಪತ್ನಿ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಮರಳಿದಾಗ ಮನೆಗೆ ಬೀಗ ಹಾಕಿದ್ದು, ಬೀಗದ ಕೀ ಸ್ಥಳದಲ್ಲೇ ಬಿದ್ದಿತ್ತು.  ಎಲ್ಲೆಡೆ ಹುಡುಕಾಡಿದರೂ ಅವರು ಪತ್ತೆಯಾಗದ ಕಾರಣ ಲಲಿತಾ ಅವರ ಸಹೋದರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಕೆಲವು ದಿನಗಳಿಂದ ಎಡಮಂಗಲದ ವ್ಯಕ್ತಿಯೋರ್ವ ಲಲಿತಾ ಅವರ ಮನೆಗೆ ಆಗಾಗ ಬರುತ್ತಿದ್ದ ಎನ್ನಲಾಗಿದ್ದು, ಆತನ ಜೊತೆ ಲಲಿತಾ ಅವರು ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!