Friday, May 3, 2024
Homeಕರಾವಳಿಉಡುಪಿಶಿರ್ವ ಸಂತ ಮೇರಿ ಕಾಲೇಜಿನಿಂದ 10000 ಮಾಸ್ಕ್ ವಿತರಣೆಗೆ ಚಾಲನೆ

ಶಿರ್ವ ಸಂತ ಮೇರಿ ಕಾಲೇಜಿನಿಂದ 10000 ಮಾಸ್ಕ್ ವಿತರಣೆಗೆ ಚಾಲನೆ

spot_img
- Advertisement -
- Advertisement -

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಎಂಎಸ್ ಡಬ್ಲ್ಯೂ, ಎಂಕಾಂ, ಎನ್ ಸಿಸಿ, ಎನ್ ಎಸ್ ಎಸ್, ರೋವರ್ಸ-ರೇಂಜರ್ಸ್ ಹಾಗೂ ರಿಲಯನ್ಸ್ ಫೌಂಡೇಶನ್ ಜಂಟಿಯಾಗಿ 10000 ಮಾಸ್ಕಗಳ ವಿತರಣೆ ಅಭಿಯಾನವನ್ನು ಆರೋಗ್ಯ ಸಮುದಾಯ ಕೇಂದ್ರ ,ಶಿರ್ವ, ಪೋಸ್ಟ್ ಆಫೀಸ್, ಆರಕ್ಷಕರ ಠಾಣೆ, ಆಶಾ ಓಲ್ಡ್ ಏಜ್ ಹೋಂ, ಮಸೀದಿ, ದೇವಾಲಯ, ಚರ್ಚ್, ಶಿರ್ವ ಗ್ರಾಮ ಪೇಟೆ , ಕಾಲೇಜಿನ ಸಂತ ಮೇರಿ ಸಮೂಹ ಸಂಸ್ಥೆಗಳ ಪ್ರದೇಶಗಳಲ್ಲಿ ಆಯೋಜಿಸಲಾಯಿತು.

ಈ ಆಭಿಯಾನಕ್ಕೆ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆ ಆರ್ ಪಾಟ್ಕರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ, ಕೋವಿಡ್ ಅಂತಹ ಸಾಂಕ್ರಮಿಕ ಕಾಯಿಲೆಗಳನ್ನು ಎದುರಿಸಬೇಕಾಗಿದ್ದರೆ ಸಾರ್ವಜನಿಕರು ತಪ್ಪದೇ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮನೆಯಿಂದ ಹೊರಗೆ ಬರುವಾಗ ಮುಖಕ್ಕೆ ಮಾಸ್ಕನ್ನು ಧರಿಸಬೇಕು. ಪ್ರಸ್ತುತ ಲಾಕ್ಡೌನ್ ನಂತರ ಈ ನಿಯಮ ಉಲ್ಲಂಘನೆಯನ್ನು ಮಾಡುವ ನಾಗರಿಕರ ಮೇಲೆ ಸೂಕ್ತ ಕ್ರಮವನ್ನು ತಗೆದುಕೊಳ್ಳುವುದು ಎಂದು ಮಾಸ್ಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಈ ಅಭಿಯಾನವನ್ನು ಶಿರ್ವ ಆರೋಗ್ಯ ಮಾತ ಇಗರ್ಜಿಯ ಸಹಾಯಕ ಧರ್ಮಗುರುಗಳಾದ.ಫಾದರ್ ರೋಲ್ವಿನ್ ಅರಾನ್ಹಾ ಅವರ ಹಾರೈಕೆಗಳೊಂದಿಗೆ ಆರಂಭಿಸಲಾಯಿತು. ಪ್ರಸ್ತುತ ಕೋವಿಡ್ ನಂತಹ ಸಾಂಕ್ರಮಿಕ ಕಾಯಿಲೆಗಳನ್ನು ಎದುರಿಸಬೇಕಾದರೆ ಕೋವಿಡ್ -19 ಲಸಿಕೆ ಪಡೆಯುವುದು ಮಾತ್ರವೇ ಮುಖ್ಯವಲ್ಲ ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಜೀವವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕಾಲೇಜಿನ ಪ್ರಾಂಶುಪಾಲರು, ಪದಾಧಿಕಾರಿಗಳು ಹಾಗೂ ಇಂತಹ ಕಾರ್ಯಕ್ರಮಕ್ಕೆ ಸಹಕರಿಸಿದ ಶಿರ್ವ ಗ್ರಾಮ ಪಂಚಾಯತಿನ ಅಧ್ಯಕ್ಷರು ಮತ್ತು ಪಿಡಿಓ ರವರನ್ನು ಶ್ಲಾಘಿಸಿ ಆಶೀರ್ವದಿಸಿದ್ದರು.

ಈ ಕಾರ್ಯಕ್ರಮದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್‌, ಗ್ರಾ.ಪಂ.ಸದಸ್ಯ ಹಸನಬ್ಬ ಶೇಖ್‌, ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಕು.ಯಶೋದಾ, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಎನ್‍ಎಸ್‍ಎಸ್ ಅಧಿಕಾರಿ ಶ್ರೀ ಪ್ರೇಮನಾಥ್, ಕು. ರಕ್ಷಾ, ರೇಂಜರ್ಸ್ ಲೀಡರ್ ಗಳಾದ ಶ್ರೀ ಪ್ರಕಾಶ್,ಶ್ರೀಮತಿ ಸಂಗೀತ ಪೂಜಾರಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಜಗದೀಶ್ ಆಚಾರ್ಯ, ಶ್ರೀಮತಿ ಶರ್ಮಿಳಾ, ಗ್ರಂಥಪಾಲಕ ಶ್ರೀ ಪ್ರಮೋದ್, ಶ್ರೀ ಕಿರಣ್ ಕುಮಾರ್, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಾವ೯ಜನಿಕರಿಗೆ ಮಾಸ್ಕ್ ವಿತರಿಸುವಲ್ಲಿ ವಿದ್ಯಾರ್ಥಿಗಳ ಜೊತೆ ಕೈಜೋಡಿಸಿದರು.

ಈ ಅಭಿಯಾನಕ್ಕೆ ಸಹಕಾರವನ್ನು ನೀಡಿದ ಶಿರ್ವ ಕಾಲೇಜಿನ ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರಾದ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ ಸತೀಶ್, ಜೂನಿಯರ್ ಅಂಡರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಅಲ್ಫೋನ್ಸೋ, ಕಂಪೆನಿ ಸಾರ್ಜಂಟ್ ಮೇಜರ್ ಪ್ರತಿಮಾ ಆಚಾರ್ಯ, ಕಂಪನಿ ಕ್ವಾಟರ್ಮಸ್ಟರ್ ರೈನ ಅಂದ್ರಾದೆ, ಸೇರ ಮಾತೆ ಮ್ಯಾಕ್ ವಾನ್, ಲೀಡರ್ ಗಳಾದ ಅಕ್ಷಯ್, ಸುರೇಖಾ, ಡೆರಿಲ್ ಡೇಸಾ, ಅಪೇಕ್ಷ , ವೈಷ್ಣವಿ, ಫ್ರಾಂಕ್ಲಿನ್ ಮತಾಯಸ್ ಮತ್ತು ಪ್ರತಿಕ್ಷ ಸಾರ್ವಜನಿಕರಿಗೆ ಮಾಸ್ಕನ್ನು ವಿತರಿಸಿ ಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಈ ಅಭಿಯಾನದಲ್ಲಿ ಭಾಗವಹಿಸಿ, ವಂದಿಸಿದರು. ಸಮಾಜಕಾರ್ಯದ ವಿಭಾಗದ,ಮುಖ್ಯಸ್ಥೆ ಲಕ್ಷ್ಮಿ ಆಚಾರ್ಯರವರು ಸರ್ವರನ್ನು ಸ್ವಾಗತಿಸಿದರು.

- Advertisement -
spot_img

Latest News

error: Content is protected !!