Saturday, October 17, 2026
Homeಕರಾವಳಿಬೆಳ್ತಂಗಡಿ: ಕಾರಿಗೆ ಕೆಸರು ಹಾರಿದ ಕಾರಣಕ್ಕೆ ಯುವಕರಿಬ್ಬರಿಂದ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಳ್ತಂಗಡಿ: ಕಾರಿಗೆ ಕೆಸರು ಹಾರಿದ ಕಾರಣಕ್ಕೆ ಯುವಕರಿಬ್ಬರಿಂದ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ

- Advertisement -
- Advertisement -

ಬೆಳ್ತಂಗಡಿ: ಕಾರಿಗೆ ಕೆಸರು ನೀರು ಹಾರಿತು ಎಂಬ ಕ್ಷುಲಕ್ಕ ಕಾರಣಕ್ಕೆ ಇಬ್ಬರು ಚಾಲಕರ ನಡುವೆ ವಾಗ್ವಾನ ನಡೆದಿದ್ದು, ಈ ವೇಳೆ ಅಣ್ಣಪ್ಪ ಎಂಬ ವ್ಯಕ್ತಿಯ ಮೇಲೆ ಸಾಧಿಕ್ ಬಳೆಂಜ ಮತ್ತು ಸಿರಾಜ್ ಕಾಪಿನಡ್ಕ ಹಲ್ಲೆ ನಡೆಸಿದ ಘಟನೆ ಇಂದು ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಪಿಲ್ಯದಲ್ಲಿ ನಡೆದಿದೆ.

ಘಟನೆ ನಡೆದಿರುವ ಸ್ಥಳ

ಬೆಳ್ತಂಗಡಿ ತಾಲೂಕಿನ ಅಡಿಕೆ ವ್ಯಾಪಾರಿ ಬಳಂಜದ ಸಾದಿಕ್ ಎಂಬವರ ಮಾರುತಿ ಕಾರ್ (KA02M3548) ಗೆ ಸುಲ್ಕೇರಿಯಿಂದ ಬೆಳ್ತಂಗಡಿಯತ್ತ ತಮ್ಮ ಕೆಲಸಕ್ಕೆ ತೆರಳುತ್ತಿದ್ದ ಲಾರಿ ಮಾಲಕರಾಗಿರುವ ಅಣ್ಣಪ್ಪ (28)ಎಂಬವರ ಫಿಗೋ ಕಾರು(KA03MM0463) ಪಿಲ್ಯ ಮಾರಿಗುಡಿ ಬಳಿ ಮಾರ್ಗ ಬದಿ ಹಾದು ಹೋಗುವಾಗ ಆಕಸ್ಮಿಕವಾಗಿ ಮಳೆಯ ಕೆಸರು ನೀರು ಹಾರಿದ್ದು ಇದರಿಂದ ಕೋಪಗೊಂಡ ಸಾದಿಕ್ ಮತ್ತು ಸಿರಾಜ್ ಸೇರಿ ಅಣ್ಣಪ್ಪ ಅವರ ಫಿಗೋ ಕಾರನ್ನು ಅಡ್ಡಗಟ್ಟಿ ನಿಂದಿಸಿ ಬೆದರಿಕೆ ಹಾಕಿ ನಂತರ ಕಾರಿನಲ್ಲಿದ್ದ ರಾಡ್(ಲಿವರ್) ಸಿರಾಜ್ ತಂದು ಸಾದಿಕ್ ಕೈಗೆ ನೀಡಿ ಹಲ್ಲೆ ಮಾಡಿದ್ದಾರೆ. ಅದಲ್ಲದೆ ಅಣ್ಣಪ್ಪ ಅವರ ಮೊಬೈಲ್ ರಸ್ತೆಗೆ ಎಸೆದು ಹಾನಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅಡಕೆ ವ್ಯಾಪಾರಿ ಸಾದಿಕ್ ಬಳೆಂಜ

ಸ್ಥಳದಲ್ಲಿ ಜನ ಸೇರಿದ್ದನ್ನು ನೋಡಿದ ಸಾಧಿಕ್ ಮತ್ತು ಸಿರಾಜ್ ಮಾರುತಿ ಕಾರು ಸಮೇತ ಪರಾರಿಯಾಗಿದ್ದಾರೆ. ಅಣ್ಣಪ್ಪ ಅವರ ಸೋಂಟ ,ಭುಜಕ್ಕೆ, ಎರಡು ಕೈ ಬೆರಳಿಗೆ ರಾಡ್ ನ ಹಲ್ಲೆಯಿಂದ ಗಾಯವಾಗಿದ್ದು ಸ್ಥಳೀಯರು ಸೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ನಂತರ ಪೊಲೀಸರು ಅಣ್ಣಪ್ಪ ನೀಡಿದ ದೂರಿಗೆ ಸಾದಿಕ್ ಮತ್ತು ಸಿರಾಜ್ ಇಬ್ಬರ ವಿರುದ್ಧ IPC 1860(U/s-323,324,341,504,506,427,34) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಧಿಕ್ ಮತ್ತು ಸಿರಾಜ್ ಇಬ್ಬರು ಕೂಡ ಅಣ್ಣಪ್ಪ ನೀಡಿದ ದೂರಿನ ಭಯಕ್ಕೆ ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅಣ್ಣಪ್ಪ ಅವರು ಹಲ್ಲೆ ಮಾಡಿದ್ದರಿಂದ ಎದೆನೋವು ಕಾಣಿಸಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!