Saturday, June 6, 2026
Homeಕರಾವಳಿಡೆಂಗ್ಯೂ ಜ್ವರಕ್ಕೆ ಬೆಳ್ತಂಗಡಿಯ ಯುವಕ ಬಲಿ

ಡೆಂಗ್ಯೂ ಜ್ವರಕ್ಕೆ ಬೆಳ್ತಂಗಡಿಯ ಯುವಕ ಬಲಿ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟು ಗ್ರಾಮದ ಅವಿವಾಹಿತ ಯುವಕನೋರ್ವ ಡೆಂಗ್ಯೂ ಜ್ವರದಿಂದಾಗಿ ಕೊನೆಯುಸಿರೆಳೆದಿದ್ದಾನೆ.

ಇಂದಬೆಟ್ಟು ಗ್ರಾಮದ ಬೀಜದಡಿ ಮನೆಯ ಟೊಕ್ಕಯ್ಯ ಗೌಡರ ಮಗ ಪ್ರಸಾದ್ ಗೌಡ (30) ಮೃತ ದುರ್ದೈವಿ.

ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದು ಪ್ರಸಾದ್ ಗೌಡರಿಗೆ ಮೂರು ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಉಜಿರೆಯ ಬೆನಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ KMC ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

- Advertisement -

Latest News

error: Content is protected !!