Saturday, May 18, 2024
Homeತಾಜಾ ಸುದ್ದಿಕೊರೊನಾ ಲಸಿಕೆ ಪಡೆದರಷ್ಟೇ ಸಿಗುತ್ತೆ ಮದ್ಯ: ಸರ್ಟಿಫಿಕೇಟ್ ತೋರಿಸಿದರಷ್ಟೇ ಬಾರ್ ಮಾಲೀಕರು ಕೊಡ್ತಾರೆ ಆಲ್ಕೋಹಾಲ್

ಕೊರೊನಾ ಲಸಿಕೆ ಪಡೆದರಷ್ಟೇ ಸಿಗುತ್ತೆ ಮದ್ಯ: ಸರ್ಟಿಫಿಕೇಟ್ ತೋರಿಸಿದರಷ್ಟೇ ಬಾರ್ ಮಾಲೀಕರು ಕೊಡ್ತಾರೆ ಆಲ್ಕೋಹಾಲ್

spot_img
- Advertisement -
- Advertisement -

ಉತ್ತರಪ್ರದೇಶ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಆದರೂ ಅದೆಷ್ಟೋ ಮಂದಿ ಲಸಿಕೆ ಸ್ವೇಕರಿಸಲು ಹಿಂದೇಟು ಹಾಕುತ್ತಲೇ ಇದ್ದಾರೆ.  ಹೀಗಾಗಿ ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಉತ್ತರ ಪ್ರದೇಶದಲ್ಲಿ ಬಾರ್​ ಮಾಲೀಕರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಹೌದು…. ಉತ್ತರಪ್ರದೇಶದ ಸೈಫೈ ನಗರದ ಬಾರ್‌ಗಳಲ್ಲಿ ವಿಶೇಷ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ಅದೇನೆಂದರೆ, ಲಸಿಕೆ ಹಾಕಿಸಿಕೊಳ್ಳದವರಿಗೆ ಮದ್ಯ ಕೊಡಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಾರ್ ಮಾಲೀಕರು ಬಂದಿದ್ದಾರೆ. ಲಸಿಕೆ ಪಡೆದ ಸರ್ಟಿಫಿಕೇಟ್ ತೋರಿಸಿದರೆ ಮಾತ್ರ ಮದ್ಯ ನೀಡಲಾಗುವುದು ಅದನ್ನು ತೋರಿಸದೇ ಇದ್ದಲ್ಲಿ ಮದ್ಯ ಕೊಡಲಾಗುವುದಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ ಚೀಟಿ ಅಂಟಿಸಿರುವ ಮಾಲೀಕರು ಲಸಿಕೆ ಪಡೆದವರಷ್ಟೇ ಮದ್ಯ ಖರೀದಿಗೆ ಅರ್ಹರು ಎಂದಿದ್ದಾರೆ.

ಅಂದಹಾಗೆ, ಈ ನಿರ್ಧಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಅಲ್ಲಿನ ಮ್ಯಾಜಿಸ್ಟ್ರೇಟ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ವತಿಯಿಂದ ಈ ತೆರನಾದ ಆದೇಶ ಹೊರಡಿಸಲಾಗಿಲ್ಲ. ಬಹುಶಃ ಬಾರ್ ಮಾಲೀಕರೇ ಲಸಿಕೆ ವಿತರಣೆಯನ್ನು ಪ್ರೇರೇಪಿಸುವ ಸಲುವಾಗಿ ಈ ನಿಯಮವನ್ನು ರೂಪಿಸಿರಬಹುದು. ಲಸಿಕೆ ಪಡೆಯಲು ಪ್ರೇರಣೆಗೆ ಇಂತಹ ಪೋಸ್ಟರ್ ಹಾಕಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಲಸಿಕೆ ಪಡೆಯಿರಿ, ಮೂರನೇ ಅಲೆ ತಡೆಗಟ್ಟಿ ಎಂದು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ತಲೆ ಕೆಡಿಸಿಕೊಂಡಿರದಿದ್ದ ಜನ ಇದೀಗ ಮದ್ಯಕ್ಕಾಗಿಯಾದರೂ ಲಸಿಕೆ ತೆಗೆದುಕೊಳ್ಳುತ್ತಾರಾ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ ಎಲ್ಲಾ ರಾಜ್ಯಗಳಲ್ಲೂ ಲಸಿಕೆ ವಿತರಣೆ ಸುಲಭವಾಗಿಸಲು ಇಂತಹದ್ದೇ ತಂತ್ರಗಾರಿಕೆಯ ಮೊರೆ ಹೋದರೂ ಅಚ್ಚರಿಯಿಲ್ಲ.

- Advertisement -
spot_img

Latest News

error: Content is protected !!