Thursday, June 4, 2026
Homeತಾಜಾ ಸುದ್ದಿತಮಿಳುನಾಡಿನಲ್ಲಿ ನಡೆಯಿತು ಯಾರೂ ಊಹಿಸಲಾಗದ ಘಟನೆ: ಪತಿ ಒಪ್ಪಿಗೆ ಪಡೆದು ಮತ್ತೊಬ್ಬಳನ್ನು ಮದುವೆಯಾದ ಪತ್ನಿ

ತಮಿಳುನಾಡಿನಲ್ಲಿ ನಡೆಯಿತು ಯಾರೂ ಊಹಿಸಲಾಗದ ಘಟನೆ: ಪತಿ ಒಪ್ಪಿಗೆ ಪಡೆದು ಮತ್ತೊಬ್ಬಳನ್ನು ಮದುವೆಯಾದ ಪತ್ನಿ

- Advertisement -
- Advertisement -

ತಮಿಳುನಾಡು : ಮೂಢನಂಬಿಕೆಗೆ ಒಳಗಾದ ಮಹಿಳೆಯೊಬ್ಬಳು ಪತಿಯ ಒಪ್ಪಿಗೆ ಪಡೆದು ಇನ್ನೊಬಳನ್ನು ವಿವಾಹವಾದ ಘಟನೆ ತಮಿಳುನಾಡಿನ ಈರೋಡ್​ ಜಿಲ್ಲೆಯ ರೈಲ್​ ನಗರದಲ್ಲಿ ನಡೆದಿದೆ.

ರಾಮಲಿಂಗಂ (42) ಮತ್ತು ಪತ್ನಿ ರಂಜಿತಾ (32) ತಮಿಳುನಾಡಿನ ಈರೋಡ್​ ಜಿಲ್ಲೆಯ ರೈಲ್​ ನಗರ ನಿವಾಸಿಗಳು. ದಂಪತಿಗೆ ದೀಪಕ್​ (15) ಮತ್ತು ಕಿಶಾಂತ್​ (6) ಎಂಬ ಇಬ್ಬರು ಮಕ್ಕಳಿದ್ದಾರೆ. ರಾಮಲಿಂಗಂ ಓರ್ವ ಸೀರೆ ಉದ್ಯಮಿ. ಈತ ಇಂದುಮತಿ ಎಂಬಾಕೆಯನ್ನು ಎರಡನೇ ಮದುವೆ ಆಗಿದ್ದ.

ರಾಮಲಿಂಗಂ ಪತ್ನಿಯರನ್ನು ಒಂದೇ ಏರಿಯಾದಲ್ಲಿ ಬೇರೆ ಬೇರೆ ಮನೆಯಲ್ಲಿಟ್ಟುಕೊಂಡಿದ್ದ. ಇದರ ನಡುವೆ ಧನಲಕ್ಷ್ಮಿ (38) ಮತ್ತು ಇಂದುಮತಿ ನಡುವೆ ಸ್ನೇಹ ಬೆಳೆದಿದೆ. ಆಗಾಗ ಒಬ್ಬರಿಗೊಬ್ಬರು ಭೇಟಿಯಾಗುವುದು ಸಾಮಾನ್ಯವಾಗಿತ್ತು. ಇಬ್ಬರಿಗೂ ದೇವರು ಮತ್ತು ಅತೀಂದ್ರಿಯ ಶಕ್ತಿಗಳ ಮೇಲೆ ಬಲವಾದ ನಂಬಿಕೆ ಇತ್ತು. ಇಬ್ಬರು ಮನಸ್ಥಿತಿ ಒಂದೇ ಆಗಿದ್ದರಿಂದ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆದಿತ್ತು. ಇದು ರಾಮಲಿಂಗಂ ಗಮನಕ್ಕೂ ಸಹ ಬಂತು. ಸಂಸಾರವೂ ಸಹ ಚೆನ್ನಾಗಿಯೇ ಸಾಗುತ್ತಿತ್ತು. ಹೀಗಿರುವಾಗಲೇ  ರಂಜಿತಾ ಮತ್ತು ಧನಲಕ್ಷ್ಮಿ ಪರಸ್ಪರ ಮದುವೆ ಮಾಡಿಕೊಳ್ಳುವುದಾಗಿ ಗಂಡನ ಬಳಿ ಒಪ್ಪಿಗೆ ಕೇಳಿದ್ದಾರೆ. ಅದಕ್ಕೆ ಗಂಡ ರಾಮಲಿಂಗಂ ಸಹ ಒಪ್ಪಿಗೆ ನೀಡಿದ್ದಾನೆ.

ಬಳಿಕ ಮಕ್ಕಳ ಮುಂದೆಯೇ ರಾಮಲಿಂಗಂ ಇಬ್ಬರಿಗೂ ಮದುವೆ ಮಾಡಿದ್ದಾನೆ. ಮದುವೆ ಮಾಡಿಕೊಂಡರೆ ಅತೀಂದ್ರಿಯ ಶಕ್ತಿ ಬರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಇದಾದ ಬಳಿಕ ಅವರು ಮಕ್ಕಳಿಗೆ ಹಿಂಸಿಸಲು ಆರಂಭಿಸಿದ್ದಾರೆ.  ಇಷ್ಟಕ್ಕೆ ಸುಮ್ಮನಾಗದ ಧನಲಕ್ಷ್ಮಿ, ರಂಜಿತ ಮತ್ತು ಧನಲಕ್ಷ್ಮೀ ಮಕ್ಕಳನ್ನು ಬಲಿ ಕೊಡಲು ಮುಂದಾಗಿದ್ದಾರೆ. ಈ ವಿಚಾರ ಮಕ್ಕಳಿಗೆ ತಿಳಿದು, ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಅಜ್ಜನ ಮನೆಗೆ ಓಡಿದ್ದಾರೆ. ಬಳಿಕ ಎಲ್ಲವನ್ನು ತಾತನ ಮುಂದೆ ವಿವರಿಸಿದ್ದಾರೆ. ಬಳಿಕ ಒಟ್ಟಿಗೆ ಹೋಗಿ ಈರೋಡ್​ ಪೊಲೀಸ್​ ವರಿಷ್ಠಾಧಿಕಾರಿ ತಂಗದೊರೈಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಂಜಿತಾ, ಧನಲಕ್ಷ್ಮೀ ಮತ್ತು ರಾಮಲಿಂಗಂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!