Monday, June 8, 2026
Homeಕರಾವಳಿಪುತ್ತೂರು: ಬೈಕ್ ಅಪಘಾತದಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ

ಪುತ್ತೂರು: ಬೈಕ್ ಅಪಘಾತದಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ

- Advertisement -
- Advertisement -

ಪುತ್ತೂರು: ನಂಗರದ ಹೊರವಲಯದ ಮಾಂತೂರು ಎಂಬಲ್ಲಿ ಬೈಕ್ ಅಪಘಾತಗೊಂಡು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ(ಮಾ.21) ನಡೆದಿದ್ದು, ಬೈಕ್‌ನಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾರೆ.

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವ ಮಡಿಕೇರಿ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ ಪುತ್ರ ಚೇತನ್ ಮೃತಪಟ್ಟವರು. ಅವರ ಸ್ನೇಹಿತ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೇತನ್ ಅವರು ಪುತ್ತೂರಿನಲ್ಲಿ ಖಾಸಗಿ ಪಿ.ಜಿಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಮಾಣಿ ಸಾದಿಕುಕ್ಕು ಜಾತ್ರೆಗೆ ಸ್ನೇಹಿತ ಸುದೀಪ್ ಅವರ ಜೊತೆ ಹೋಗಿದ್ದವರು. ಬಳಿಕ ರಾತ್ರಿ ಸ್ನೇಹಿತ ಸುದೀಪ್ ಅವರ ಬೆಳ್ಳಾರೆ ಮನೆಗೆ ಹೋಗುತ್ತಿದ್ದ ವೇಳೆ ಮಾಂತುರು ಸಮೀಪ ಬೈಕ್ ಅಪಘಾತಗೊಂಡಿದ್ದು ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಈ ನಡುವೇ ಚೇತನ್ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡ ಸುದೀಪ್ ರವರನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ರಾತ್ರಿ ಕರೆದೊಯ್ಯಲಾಗಿದೆ.

- Advertisement -

Latest News

error: Content is protected !!