Friday, June 5, 2026
Homeತಾಜಾ ಸುದ್ದಿತಮ್ಮ ತಮ್ಮ ಎಂದು ಹೇಳುತ್ತಲೇ ಮಹಿಳೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಯುವಕ: ಸಾರ್ವಜನಿಕರ ಎದುರೇ...

ತಮ್ಮ ತಮ್ಮ ಎಂದು ಹೇಳುತ್ತಲೇ ಮಹಿಳೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಯುವಕ: ಸಾರ್ವಜನಿಕರ ಎದುರೇ ಯುವಕನಿಗೆ ಸಿಕ್ತು ಚಪ್ಪಲಿಯೇಟು

- Advertisement -
- Advertisement -

ಕೊಪ್ಪಳ: ತಮ್ಮ ಎಂದು ಸಲುಗೆ ಕೊಟ್ಟಿದ್ದ ಮಹಿಳೆಗೆ ಯುವಕನೊಬ್ಬ ಅಶ್ಲೀಲ ಮೆಸೇಜ್ ಕಳುಹಿಸಿ ಚಪ್ಪಲಿ ಏಟು ತಿಂದ ಘಟನೆ ಕೊಪ್ಪಳದ ಜಿಲ್ಲಾ ಆಸ್ಪತ್ರೆ ಮುಂಭಾಗ ನಡೆದಿದೆ. ಕೊಪ್ಪಳ ತಾಲೂಕಿನ ನರೇಗಲ್ ನಿವಾಸಿ ವೀರಯ್ಯ ಚಪ್ಪಲಿ ಏಟು ತಿಂದ ಯವಕ.

ವೀರಯ್ಯ ಮಹಿಳೆಗಿಂತ ಚಿಕ್ಕವನು. ಹಾಗಾಗಿ ಮಹಿಳೆ ತಮ್ಮ ರೀತಿ ಎಂದು ಆತನಿಗೆ ಸಲುಗೆ ಕೊಟ್ಟಿದ್ದಳು. ಅದನ್ನೇ ದುರಪಯೋಗಿಸಿಕೊಂಡ ವೀರಯ್ಯ ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ. ಪದೇ ಪದೇ ಮೊಬೈಲ್ ಗೆ ಅಶ್ಲೀಲ ಸಂದೇಶದ ಜೊತೆಗೆ ನಾನು ಅವಳನ್ನ ಲವ್ ಮಾಡ್ತೀನಿ ಎಂದೂ ಊರವರ ಮುಂದೆ ಹೇಳಿಕೊಂಡಿದ್ದನು.

ಹೀಗಾಗಿ ರೊಚ್ಚಿಗೆದ್ದ ಮಹಿಳೆ ವೀರಯ್ಯನನ್ನು ಮನಬಂದಂತೆ ಥಳಿಸಿದ್ದಾಳೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ. ಸದ್ಯ ವೀರಯ್ಯ ಕೊಪ್ಪಳ ಮಹಿಳಾ ಪೊಲೀಸರ ವಶದಲ್ಲಿದ್ದಾನೆ.

- Advertisement -

Latest News

error: Content is protected !!