Monday, May 20, 2024
Homeಕರಾವಳಿಇಂದೆಥಾ ಅವಸ್ಥೆ ಮಾರ್ರೆ.. ! : ಕಾರು ಪಾರ್ಕ್ ಮಾಡಿದೆ ಅಷ್ಟು ಜಾಗ ಬಿಟ್ಟು...

ಇಂದೆಥಾ ಅವಸ್ಥೆ ಮಾರ್ರೆ.. ! : ಕಾರು ಪಾರ್ಕ್ ಮಾಡಿದೆ ಅಷ್ಟು ಜಾಗ ಬಿಟ್ಟು ಡಾಂಬರು ಹಾಕಿದ್ರು…

spot_img
- Advertisement -
- Advertisement -

ಬಂಟ್ವಾಳ: ರಸ್ತೆಯಲ್ಲಿ ಕಾರು ಪಾರ್ಕ್ ಮಾಡಿದೆ ಅಂತಾ ಅಷ್ಟು ಜಾಗವನ್ನು ಬಿಟ್ಟು ಡಾಂಬರು ಹಾಕಿರುವ ವಿಚಿತ್ರ ಪ್ರಸಂಗ ಬಂಟ್ವಾಳ ತಾಲೂಕಿನ ವಿಟ್ಲ ಮುಖ್ಯ ರಸ್ತೆಯಲ್ಲಿ ನಡೆದಿದೆ.

ವಿಟ್ಲದ ಮುಖ್ಯ ರಸ್ತೆಗೆ ಡಾಂಬರು ಹಾಕುವ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಪ್ರಾಥಮಿಕ  ಶಾಲೆಯ ಮುಂಭಾಗ ಈ ರಸ್ತೆಗೆ ತಾಗಿ ಕೊಂಡು ಕಾರೊಂದನ್ನು ಪಾರ್ಕ್  ಮಾಡಲಾಗಿತ್ತು. ಆದ್ರೆ ಕಾರಿನ ಮಾಲೀಕರನ್ನು ಕರೆದು ಕಾರನ್ನು ತೆಗೆಸೋದು ಬಿಟ್ಟು ಡಾಂಬರು ಹಾಕುವವರು ಕಾರು ನಿಂತಿರುವ ಅಷ್ಟು ಜಾಗವನ್ನು ಬಿಟ್ಟು ಡಾಂಬರ್ ಹಾಕಿ ಕಾಮಗಾರಿ ಮುಗಿಸಿದ್ದಾರೆ. ಈ ಬೇಜಬ್ದಾರಿ ಕೆಲಸ ಇದೀಗ ಚರ್ಚೆಗೆ ಕಾರಣವಾಗಿದೆ.

ಅಲ್ಲದೇ ಕಾರು ನಿಲ್ಲಿಸಿರುವ ಫೋಟೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಬೇಜಬ್ದಾರಿ ಕೆಲಸಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

- Advertisement -
spot_img

Latest News

error: Content is protected !!