Thursday, June 4, 2026
Homeತಾಜಾ ಸುದ್ದಿಸಮುದ್ರದಲ್ಲಿ ತೇಲಿ ಬಂತು ಫುಲ್ ಬಾಟಲ್: ವಿದೇಶಿ ಮದ್ಯ ಅಂತಾ ಕುಡಿದ ಮೀನುಗಾರರಿಗೆ ಕಾದಿತ್ತು ಊಹಿಸಲಾಗದ...

ಸಮುದ್ರದಲ್ಲಿ ತೇಲಿ ಬಂತು ಫುಲ್ ಬಾಟಲ್: ವಿದೇಶಿ ಮದ್ಯ ಅಂತಾ ಕುಡಿದ ಮೀನುಗಾರರಿಗೆ ಕಾದಿತ್ತು ಊಹಿಸಲಾಗದ ಶಾಕ್

- Advertisement -
- Advertisement -

ಚೆನ್ನೈ: ಸಮುದ್ರದಲ್ಲಿ ದ್ರವ ತುಂಬಿದ ಕೆಲವು ಬಾಟಲಿಗಳು ತೇಲಿ ಬಂದಿದ್ದನ್ನು ನೋಡಿದ ಮೀನುಗಾರರು ಇವು ವಿದೇಶಿ ಮದ್ಯ ಎಂದು ಸೇವನೆ ಮಾಡಿರುವ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದೆ.

ವಿಷಪೂರಿತ ದ್ರವವನ್ನು ಮೀನುಗಾರರು ಮದ್ಯ ಅಂತಾ ಕುಡಿದಿದ್ದಾರೆ.  ಅದನ್ನು ಕುಡಿಯುತ್ತಿದ್ದಂತೆಯೇ ಮೂವರು ಮೀನುಗಾರರು ಮೃತಪಟ್ಟಿದ್ದಾರೆ.

ಮೃತರನ್ನು ರಾಮೇಶ್ವರಂ ಬಳಿಯ ತಂಗಾಚಿಮಡಂನ ಅಂಥೋನಿಸ್ವಾಮಿ (38) ಅರೋಕಿಯಾ ಪ್ರೋಹಿತ್ (50) ಹಾಗೂ ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಈ ಮೂವರು ಸಮುದ್ರದಲ್ಲಿ ತೇಲಿ ಬರುತ್ತಿರುವ ಬಾಟಲ್ ನೋಡಿ ವಿದೇಶಿ ಮದ್ಯ ಎಂದು ಕುಡಿದು ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಮೂವರು ಮೀನು ಹಿಡಿಯಲು ಬೋಟ್‍ನಲ್ಲಿ ಸಮುದ್ರಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಸಮುದ್ರಕ್ಕೆ ಇಳಿಯುತ್ತಿದ್ದಂತೆಯೇ ದೂರದಲ್ಲಿ ತುಂಬಿದ ಬಾಟಲಿಗಳು ತೇಲಿ ಬರುತ್ತಿರುವುದನ್ನು ಇವರು ನೋಡಿದ್ದಾರೆ. ಅವು ಮದ್ಯದ ಬಾಟಲಿಗಳಾಗಿದ್ದವು. ಅದನ್ನು ನೋಡಿದ ಮೀನುಗಾರರು ವಿದೇಶಿ ಮದ್ಯ ಎಂದು ತಿಳಿದು ಕುಡಿದು ಪ್ರಾಣ ಬಿಟ್ಟಿದ್ದಾರೆ.

ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರಾವಳಿ ಭದ್ರತಾ ಪಡೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!