Thursday, June 4, 2026
Homeಕರಾವಳಿಕಡಬದಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ಕಡಬದಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಕಡಬ. ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ  ಕಡಬ ತಾಲೂಕಿನ‌ ಕೊಯಿಲ‌ ಗ್ರಾಮದ ಕೊನೆಮಜಲು ಪರಪ್ಪು ಎಂಬಲ್ಲಿ ನಿನ್ನೆ ನಡೆದಿದೆ.

ಮೃತ ಯುವಕನನ್ನು ಕೊಯಿಲ‌ ಗ್ರಾಮದ ಪರಪ್ಪು ನಿವಾಸಿ ಮಾಯಿಲ ಮುಗೇರ ಎಂಬವರ ಪುತ್ರ ಆನಂದ ಮುಗೇರ (26) ಎಂದು ಗುರುತಿಸಲಾಗಿದೆ.

ಈತ ಕುಮಾರಧಾರ ನದಿಯ ಕೊನೆಮಜಲು‌ ಎಂಬಲ್ಲಿ ಬಲೆ ಬೀಸಿ ಮೀನು‌ ಹಿಡಿಯಲು ನಿನ್ನ ಮಧ್ಯಾಹ್ನದ ಬಳಿಕ ಮನೆಗೆ ಬಂದಿದ್ದ ಸಂಬಂಧಿಕ ಬಾಲಕನನ್ನು ಕರೆದುಕೊಂಡು ಹೋಗಿದ್ದ . ಬಾಲಕನನ್ನು ನದಿ ದಡದಲ್ಲಿ‌ ಬಿಟ್ಟು ನದಿಯ ಇನ್ನೊಂದು ಭಾಗದ ಆಳವಾದ ನೀರು ಇರುವ ಜಾಗದಲ್ಲಿ ಬಲೆ ಬೀಸಿ ವಾಪಾಸ್ಸಾಗುವಾಗ ಸುಸ್ತಾಗಿ ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾನೆ. 

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಡಬ ಪೋಲೀಸರು ನಿನ್ನೆ ರಾತ್ರಿಯವರೆಗೆ ಹುಡುಕಾಡಿ ವಾಪಾಸ್ಸಾಗಿದ್ದರು. ಇಂದು ಬೆಳಗ್ಗಿನಿಂದ ಮುಳುಗು ತಜ್ಞರನ್ನು ಕರೆಸಿ ನದಿಯಲ್ಲಿ ಹುಡಿಕಾಡಿದಾಗ ಮೃತದೇಹ‌ ಪತ್ತೆಯಾಗಿದೆ.

- Advertisement -

Latest News

error: Content is protected !!