Saturday, June 6, 2026
Homeತಾಜಾ ಸುದ್ದಿಅಕ್ಕನ ನಡತೆ ಪ್ರಶ್ನಿಸಿದ ಬಾವ: ಕೋಪದಿಂದ ಬಾವನ ಕಿವಿಯನ್ನೇ ಕತ್ತರಿಸಿದ ಬಾಮೈದ

ಅಕ್ಕನ ನಡತೆ ಪ್ರಶ್ನಿಸಿದ ಬಾವ: ಕೋಪದಿಂದ ಬಾವನ ಕಿವಿಯನ್ನೇ ಕತ್ತರಿಸಿದ ಬಾಮೈದ

- Advertisement -
- Advertisement -

ಚಿತ್ರದುರ್ಗ: ತನ್ನ ಎದುರೇ ಅಕ್ಕನ ನಡತೆಯನ್ನು ಪ್ರಶ್ನಿಸಿದರೆಂದು ಬಾಮೈದ ಬಾವನ ಕಿವಿಯನ್ನು ಕತ್ತರಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತ್ಯಾಗರಾಜನಗರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಮೈಲಾರಿ(39) ಪತ್ನಿ ಹೇಮಶ್ರೀ ಪದೇ ಪದೇ ಬೇರೆಯವರೊಂದಿಗೆ ಓಡಾಡುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಆಕೆಯ ನಡತೆ ಬಗ್ಗೆ ಅನುಮಾನಗೊಂಡ ಪತಿ, ಆಕೆಗೆ ವಾರ್ನಿಂಗ್​ ಕೊಟ್ಟಿದ್ದ. ಇದೇ ವಿಚಾರವಾಗಿ ಗಲಾಟೆ ಕೂಡ ನಡೆದಿದೆ. ಈ ವೇಳೆ ಅಲ್ಲೇ ಇದ್ದ  ಅಪ್ರಾಪ್ತ ವಯಸ್ಸಿನ ಬಾಮೈದ ಬಾವನ ಕಿವಿಯನ್ನು ಕಚ್ಚ ತುಂಡರಿಸಿದ್ದಾನೆ.

ಕಿವಿ ಕಳೆದುಕೊಂಡ ಮೈಲಾರಿ ತುಂಡಾದ ಕಿವಿಯನ್ನ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿಕೊಂಡು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.  ಈ ಸಂಬಂಧ

ಳ್ಳಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!