Sunday, June 28, 2026
Homeತಾಜಾ ಸುದ್ದಿಪತ್ನಿಗೆ ವಂಚಿಸಿ ಯುವತಿಯೊಬ್ಬಳನ್ನು ವಿವಾಹವಾದ ಪೊಲೀಸಪ್ಪ: ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ

ಪತ್ನಿಗೆ ವಂಚಿಸಿ ಯುವತಿಯೊಬ್ಬಳನ್ನು ವಿವಾಹವಾದ ಪೊಲೀಸಪ್ಪ: ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ

- Advertisement -
- Advertisement -

ಮೈಸೂರು: ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಪತ್ನಿಗೆ ವಂಚಿಸಿ ಯುವತಿಯೊಬ್ಬಳನ್ನು ವಿವಾಹವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.  

ಮೈಸೂರು ನಗರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಮೀವುಲ್ಲಾ ವಿರುದ್ಧ ಇಂತಹದ್ದೊಂದು ಆರೋಪ ಕೇಳಿ ಬಂದಿದೆ.  ಸಮೀವುಲ್ಲಾ, 2017 ರಲ್ಲಿ ಎಚ್.ಡಿ ಕೋಟೆಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿಯನ್ನು ಮದುವೆಯಾಗಿದ್ದರು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ಬೈಕ್ ಹಾಗೂ ಚಿನ್ನಾಭರಣ ಪಡೆದುಕೊಂಡಿದ್ದರು.

ಆರು ತಿಂಗಳು ಪತ್ನಿಯೊಂದಿಗೆ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದ ಸಮೀವುಲ್ಲಾ, ದಿನ ಕಳೆದಂತೆ ಕ್ಷುಲ್ಲಕ ಕಾರಣಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ವರ್ಷದ ನಂತರ ಗಂಡ ಸಮೀವುಲ್ಲಾ ಹಾಗೂ ಮನೆಯವರು ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿದ್ದರು ಮತ್ತು ಆಕೆಯ ಬಳಿಯಿದ್ದ ಚಿನ್ನಾಭರಣ ಕಸಿದುಕೊಂಡಿದ್ದರು ಎನ್ನಲಾಗಿದೆ.

ಇತ್ತೀಚಿಗೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ ಸಮೀವುಲ್ಲಾ, ಇನ್ನೊಂದು ಹುಡುಗಿ ಜೊತೆ ಮದುವೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ವಂಚನೆಗೊಳಗಾದ ಮಹಿಳೆಯು ಪತಿ ಸಮೀವುಲ್ಲಾ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ. ಈ ನಡುವೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿ ಮೂರು ದಿನ ಕಳೆದರೂ, ಆರೋಪಿ ಸಮೀವುಲ್ಲಾ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಮೀವುಲ್ಲಾನ ಪತ್ನಿ ಆರೋಪಿಸಿದ್ದಾರೆ.

- Advertisement -

Latest News

error: Content is protected !!