Wednesday, April 24, 2024
Homeಕ್ರೀಡೆಭಾರತ-ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯ ಮತ್ತು ಸರಣಿ ಗೆದ್ದು ಬೀಗಿದ ಟೀಮ್ ಇಂಡಿಯಾ: ವಿಶ್ವ ಟೆಸ್ಟ್...

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯ ಮತ್ತು ಸರಣಿ ಗೆದ್ದು ಬೀಗಿದ ಟೀಮ್ ಇಂಡಿಯಾ: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಟಿಕೆಟ್​ ಪಕ್ಕಾ​..!

spot_img
- Advertisement -
- Advertisement -

ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ 4 ಟೆಸ್ಟ್​ ಸರಣಿಗಳ ಅಂತಿಮ ಟೆಸ್ಟ್​ ಪಂದ್ಯದ 3ನೇ ದಿನದಾಟದಲ್ಲೇ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಈ ಮೂಲಕ ಸರಣಿಯನ್ನೂ ಕೂಡ 3-1ರೊಂದಿಗೆ ತನ್ನದಾಗಿಸಿಕೊಂಡಿದೆ. ಇನ್ಸಿಂಗ್‌ ಹಾಗೂ 25 ರನ್‌ಗಳೊಂದಿಗೆ ಟೀಮ್‌ ಇಂಡಿಯಾ ಗೆಲುವನ್ನು ತನ್ನದಾಗಿಸಿಕೊಂಡಿದೆ.

3ನೇ ದಿನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಭಾರತ ಸ್ಪಿನ್ ದ್ವಯರಾದ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಘಾತಕವಾಗಿ ಮೇಲೆರಗಿ ಇಂಗ್ಲೆಂಡ್ ಬ್ಯಾಟ್ಸ್‍ಮ್ಯಾನ್‍ಗಳನ್ನು ಗ್ರೀಸ್‍ನಲ್ಲಿ ಪರದಾಡುವಂತೆ ಮಾಡಿದರು. ಅಕ್ಷರ್ ಪಟೇಲ್ 5 ವಿಕೆಟ್ (24 ಓವರ್, 6 ಮೇಡನ್ ಓವರ್) ಕಿತ್ತು ಮಿಂಚು ಹರಿಸಿದರೆ, ರವಿಚಂದ್ರನ್ ಅಶ್ವಿನ್ 5 ವಿಕೆಟ್( 22.5 ಓವರ್, 4 ಮೇಡನ್ ಓವರ್) ಪಡೆದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು ತಂದು ಕೊಟ್ಟರು.

ಈ ಮೊದಲು ಎರಡನೇ ದಿನ 294 ರನ್‍ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ ಬ್ಯಾಟಿಂಗ್ ಮುಂದುವರಿಸಿ 365 ರನ್‍ಗಳಿಗೆ ಸರ್ವಪತನ ಕಂಡಿತು. ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ವಾಷಿಂಗ್ಟನ್ ಸುಂದರ್ 96 ರನ್ (174 ಎಸೆತ, 10 ಬೌಡಂರಿ, 1 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದು ಶತಕ ವಂಚಿತರಾದರು.

ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 3-1ರಲ್ಲಿ ಜಯಗಳಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ನ ಫೈನಲ್‍ಗೆ ಪ್ರವೇಶಿಸಿದೆ.

- Advertisement -
spot_img

Latest News

error: Content is protected !!