Monday, June 15, 2026
Homeತಾಜಾ ಸುದ್ದಿಐವರು ಹಿರಿಯ 'IPS' ಅಧಿಕಾರಿಗಳ ವರ್ಗಾವಣೆ: 'ರೈಲ್ವೆ ADGP' ಆಗಿ 'ಭಾಸ್ಕರ್ ರಾವ್' ಗೆ ಜವಾಬ್ದಾರಿ

ಐವರು ಹಿರಿಯ ‘IPS’ ಅಧಿಕಾರಿಗಳ ವರ್ಗಾವಣೆ: ‘ರೈಲ್ವೆ ADGP’ ಆಗಿ ‘ಭಾಸ್ಕರ್ ರಾವ್’ ಗೆ ಜವಾಬ್ದಾರಿ

- Advertisement -
- Advertisement -

ಬೆಂಗಳೂರು: ಇತ್ತೀಚೆಗಷ್ಟೇ 9 ಜಿಲ್ಲಾಧಿಕಾರಿಗಳು ಸೇರಿದಂತೆ 41 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯಸರ್ಕಾರ ಇಂದು ಮತ್ತೆ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಭಾಸ್ಕರ್ ರಾವ್ ಅವರನ್ನು ರೈಲ್ವೇ ಇಲಾಖೆಯ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ಎ.ಜೆ.ಚಕ್ರವರ್ತಿ ಅವರನ್ನು ನಿಯೋಜಿಸಲಾಗಿದೆ. ಪ್ರಶಾಂತ್ ಕುಮಾರ್ ಠಾಕೂರ್ ಅವರನ್ನು ಲೋಕಾಯುಕ್ತ ಎಡಿಜಿಪಿ ಸ್ಥಾನಕ್ಕೆ, ಡಾ.ಎ.ಎಸ್.ಮೂರ್ತಿ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮಕ್ಕೆ ಎಡಿಜಿಪಿ ಹಾಗೂ ನಿರ್ದೇಶಕರಾಗಿ ನೇಮಿಸಲಾಗಿದೆ. ಡಾ.ಕೆ.ರಾಮಚಂದ್ರರಾವ್ ಅವರನ್ನು ಬಿಎಂಟಿಎಫ್ ವಿಭಾಗದ ಎಡಿಜಿಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ
ಭಾಸ್ಕರರಾವ್ -ಎಡಿಜಿಪಿ ರೈಲ್ವೆ,
ಪ್ರಶಾಂತ್ ಕುಮಾರ್ ಠಾಕೂರ್ -ಎಡಿಜಿಪಿ ಲೋಕಾಯುಕ್ತ,
ಡಾ.ಎಸ್. ಮೂರ್ತಿ – ಎಡಿಜಿಪಿ ಮತ್ತು ಎಂಡಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ,
ಡಾ.ಕೆ. ರಾಮಚಂದ್ರರಾವ್ -ಎಡಿಜಿಪಿ ಬಿಎಂಟಿಎಫ್
ಅರುಣ್ ಚಕ್ರವರ್ತಿ -ಎಡಿಜಿಪಿ ಆಂತರಿಕ ಭದ್ರತಾ ವಿಭಾಗ.

- Advertisement -

Latest News

error: Content is protected !!