Tuesday, May 21, 2024
Homeಕರಾವಳಿಬಂಗಾರ ಪಲ್ಕೆ ದುರಂತ :22 ದಿನಗಳ ಕಾರ್ಯಾಚರಣೆ ಬಳಿಕ ಸನತ್ ಶೆಟ್ಟಿ ಮೃತದೇಹ ಪತ್ತೆ

ಬಂಗಾರ ಪಲ್ಕೆ ದುರಂತ :22 ದಿನಗಳ ಕಾರ್ಯಾಚರಣೆ ಬಳಿಕ ಸನತ್ ಶೆಟ್ಟಿ ಮೃತದೇಹ ಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ: 22 ದಿನಗಳ ಹಿಂದೆ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದ ಸಮೀಪ ಗುಡ್ಡ ಕುಸಿದು ಸಂಭವಿಸಿದ ದುರಂತದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್‌ ಶೆಟ್ಟಿ (20)ಯ ಮೃತದೇಹ ಇಂದು ದೊರೆತಿದೆ.

ಬಂಡೆಕಲ್ಲು ಒಡೆದು ಜೆಸಿಬಿ, ಹಿಟಾಚಿ 23 ದಿನ ಸುಮಾರು 30 ಅಡಿಗಳಷ್ಟು ಆಳದ ಮಣ್ಣು ತೆರವು ಕಾರ್ಯ ಸತತವಾಗಿ ನಡೆದಿತ್ತು. ವಿದ್ಯುತ್ ಸಂಪರ್ಕವಾಗಲಿ, ಯಂತ್ರೋಪಕರಣ ಬಳಸಲು ಸಾಧ್ಯವಿಲ್ಲದ ದುರ್ಗಮ ಸ್ಥಳವಾದ್ದರೂ ಜಿಲ್ಲಾಡಳಿತ, ಶಾಸಕರು, ಸ್ಥಳೀಯರು, ಸಂಘ ಸಂಸ್ಥೆಗಳ ಸಹಕಾರದಿಂದ ದೇಹ ಶೋಧ ಕಾರ್ಯದ ಎಲ್ಲ ಪ್ರಯತ್ನಗಳು ನಡೆದಿದ್ದವು.

ಒಂದೆರಡು ಸಲ ವಾಸನೆ ಬಂದಿತ್ತಾದರೂ ದೇಹ ಪತ್ತೆಯಾಗದೆ ಪ್ರಕರಣ ಕಗ್ಗಂಟಾಗಿತ್ತು. ಇದೀಗ ಸನತ್ ಶೆಟ್ಟಿ ಮೃತದೇಹ ಪತ್ತೆಯಾಗಿರೋದು ಅವರ ಕುಟುಂಬಸ್ಥರಿಗೆ ಬೇಸರದ ನಡುವೆಯೂ ತುಸು ನೆಮ್ಮದಿ ತರಿಸಿದೆ.

ಸ್ಥಳಕ್ಕೆ ವೈದ್ಯಕೀಯ ತಂಡ ಭೇಟಿ ನೀಡಲಿದೆ. ಮುಂದಿನ ಕಾರ್ಯಕ್ಕೆ ಪೊಲೀಸ್ ಇಲಾಖೆ ಪೂರ್ವ ಸಿದ್ಧತೆ ನಡೆಸಿದೆ.

- Advertisement -
spot_img

Latest News

error: Content is protected !!