Wednesday, June 3, 2026
Homeಕರಾವಳಿಕೊಣಾಜೆಯ ಮುಡಿಪು ಬೆಟ್ಟದಲ್ಲಿ ಅನ್ಯಕೋಮಿನ ಯುವಕ ಯವತಿಯ ಲವ್ವಿ ಡವ್ವಿ: ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ...

ಕೊಣಾಜೆಯ ಮುಡಿಪು ಬೆಟ್ಟದಲ್ಲಿ ಅನ್ಯಕೋಮಿನ ಯುವಕ ಯವತಿಯ ಲವ್ವಿ ಡವ್ವಿ: ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣ ವೇದಿಕೆ ಸದಸ್ಯರು

- Advertisement -
- Advertisement -

ಕೊಣಾಜೆ:  ಜೊತೆಯಾಗಿದ್ದ ಅನ್ಯ ಕೋಮಿನ ಯುವಕ ಯುವತಿಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಣಾಜೆಯ  ಮುಡಿಪಿನಲ್ಲಿ ನಡೆದಿದೆ.

ಇಲ್ಲಿನ ಮುಡಿಪು ಪವಾಡ ಬೆಟ್ಟದಲ್ಲಿ ಮೂಡುಬಿದಿರೆ ನಿವಾಸಿ ಮಹಮ್ಮದ್ ಜುನೈದ್ ಎಂಬಾತ  ಮುಡಿಪು ಡಿ.ಜಿ ಕಟ್ಟೆ ವಿದ್ಯಾನಗರ ನಿವಾಸಿಯಾದ ಹಿಂದೂ ಯುವತಿಯ ನಡುವೆ ಸ್ನೇಹವಿತ್ತು.  ಈ ಜೋಡಿಯು ಮುಡಿಪು ಬೆಟ್ಟದಲ್ಲಿ ಜೊತೆಯಾಗಿದ್ದರು ಎನ್ನಲಾಗಿದೆ. 

ಈ ಕುರಿತು ಮಾಹಿತಿ ಪಡೆದು ದಾಳಿ ಮಾಡಿದ ಹಿಂದು ಜಾಗರಣ ವೇದಿಕೆ ಸದಸ್ಯರು ಘಟನಾ ಸ್ಥಳಕ್ಕೆ ಬಂದು ಯುವಕನಲ್ಲಿ ವಿಚಾರಿಸಿದಾಗ ತಾನು ಬ್ರಾಹ್ಮಣ, ಹೆಸರು ಗಣೇಶನೆಂದು ಹೇಳಿದ್ದಾನೆ. ಈ ಸಂದರ್ಭ ಕಾರ್ಯಕರ್ತರು ಜನಿವಾರ ಎಲ್ಲೆಂದು ಕೇಳಿದಾಗ ಗಲಿಬಿಲಿಗೊಂಡಿದ್ದಾನೆ. ಬಳಿಕ ಸರಿಯಾಗಿ ವಿಚಾರಿಸಿದಾಗ ಸತ್ಯಾಂಶ ಹೊರಬಿದ್ದಿದ್ದು, ಯುವಕನನ್ನು ಕೊಣಾಜೆ ಪೊಲೀಸರ ವಶಕ್ಕೆ ನೀಡಲಾಗಿದೆ.

- Advertisement -

Latest News

error: Content is protected !!