Wednesday, June 3, 2026
Homeತಾಜಾ ಸುದ್ದಿನನ್ನ ಮದುವೆಗೆ ಅಪ್ಪನಿಲ್ಲ ಎಂದು ಕೊರಗುತ್ತಿದ್ದ ತಂಗಿ: ಮುದ್ದು ತಂಗಿಗೆ ಅಕ್ಕ ನೀಡಿದಳು ಯಾರೂ ಊಹಿಸಲಾಗದ...

ನನ್ನ ಮದುವೆಗೆ ಅಪ್ಪನಿಲ್ಲ ಎಂದು ಕೊರಗುತ್ತಿದ್ದ ತಂಗಿ: ಮುದ್ದು ತಂಗಿಗೆ ಅಕ್ಕ ನೀಡಿದಳು ಯಾರೂ ಊಹಿಸಲಾಗದ ಉಡುಗೊರೆ

- Advertisement -
- Advertisement -

ತಮಿಳುನಾಡು : ತನ್ನ ಮದುವೆಗೆ ಅಪ್ಪನ ಉಪಸ್ಥಿತಿ ಇರಲ್ಲ ಅಂತಾ ಅಗಲಿದ ಅಪ್ಪನನ್ನು ನೆನದು ಕೊರಗುತ್ತಿದ್ದ ತಂಗಿಯೊಬ್ಬಳಿಗೆ ಆಕೆಯ ಅಕ್ಕ ಯಾರೂ ಊಹಿಸಲಾಗದ ಉಡುಗೊರೆ ನೀಡಿದ್ದಾರೆ.

ಹೌದು.. ಇಂತಹದ್ದೊಂದು ಅಪರೂಪದ ಘಟನೆ ನಡೆದಿರೋದು ತಮಿಳುನಾಡಿನ ತಂಜಾವೂರಿನಲ್ಲಿ. ತಂಜಾವೂರು ಜಿಲ್ಲೆಯ ಪಟ್ಟುಕ್ಕೊಟ್ಟೈ ಮೂಲದ ಉದ್ಯಮಿ ಸೆಲ್ವಂಗೆ ಮೂವರು ಪುತ್ರಿಯರು. ಮೊದಲಿಬ್ಬರ ವಿವಾಹವಾದ ನಂತರ ಅವರು 2012ರಲ್ಲಿ ನಿಧನರಾಗಿದರು. ಕಿರಿಯ ಮಗಳು ಪ್ರಭಾ ತನ್ನ ಮದುವೆಗೆ ತಂದೆಯ ಅನುಪಸ್ಥಿತಿ ಕುರಿತು ಮೊದಲೇ ಅಸಮಾಧಾನಗೊಂಡಿದ್ದರು. ನನ್ನ ಮದುವೆಗೆ ಅಪ್ಪ ಇಲ್ಲ ಎಂದು ಕಣ್ಣೀರಿಟ್ಟಿದ್ದರು.

ತಂಗಿಯ ನೋವು ಅರಿತ ಹಿರಿಯ ಸಹೋದರಿ ಭುವನೇಶ್ವರಿ (37) ಮದುವೆ ಮಂಟಪದಲ್ಲಿ ತಮ್ಮ ದಿವಂಗತ ತಂದೆಯ ಸಿಲಿಕಾನ್ ಪ್ರತಿಮೆಯನ್ನು ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದರು. ತಂದೆಯ ಪ್ರತಿಮೆ ನೋಡಿದ ನಂತರ ವಧು ಪ್ರಭಾ ಒಂದೇ ಸಮನೇ ಕಣ್ಣೀರು ಹಾಕಿದಳು. ಪ್ರತಿಮೆಯ ಮುಂದೆಯೇ ವಧು ವರರು ಹಾರ ಬದಲಾಯಿಸಿಕೊಂಡರು.

ಇನ್ನು ಈ ಬಗ್ಗೆ ಸಹೋದರಿ ಭುವನೇಶ್ವರಿ ಮಾತನಾಡಿ, ತಂದೆಯ ಪ್ರತಿಮೆಯನ್ನು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ₹6 ಲಕ್ಷ ವೆಚ್ಚದಲ್ಲಿ ತಯಾರಿಸಿದೆ. ಅದು ನೈಜವಾಗಿ ಕಾಣುವಂತಿರಲಿ ಎಂದು ಸಂಸ್ಥೆಗೆ ಮನವಿ ಮಾಡಿದ್ದೆವು. ಅದಕ್ಕಾಗಿ ನಾವು ಕೂಡ ಹಗಲು ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದೆವು. ಕಿರಿಯ ಸಹೋದರಿ ಮದುವೆ ಸಂದರ್ಭದಲ್ಲಿ ತಂದೆಯು ಪ್ರತಿಮೆ ರೂಪದಲ್ಲಿ ಆಗಮಿಸಿದ ಕಾರಣ ಇಡೀ ಕುಟುಂಬ ಸಂತೋಷದಿಂದ ಕೂಡಿದೆ ಎಂದು ಹೇಳಿದರು.

- Advertisement -

Latest News

error: Content is protected !!