Wednesday, June 3, 2026
Homeತಾಜಾ ಸುದ್ದಿಫ್ರಿಡ್ಜ್ ಸ್ಫೋಟ, ಮೂವರಿಗೆ ಗಂಭೀರ ಗಾಯ

ಫ್ರಿಡ್ಜ್ ಸ್ಫೋಟ, ಮೂವರಿಗೆ ಗಂಭೀರ ಗಾಯ

- Advertisement -
- Advertisement -

ಮೈಸೂರು : ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ, ಮನೆಯ ಫ್ರಿಡ್ಜ್ ಗೂ ತಗುಲಿದ ಪರಿಣಾಮ, ಫ್ರಿಡ್ಜ್ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ಮೈಸೂರಿನ ಲಾಲ್ ಬಂದ್ ಬೀದಿಯೊಂದರ ಮನೆಯಲ್ಲಿ ನಡೆದಿದೆ.

ಮೈಸೂರಿನ ಲಾಲ್ ಬಂದ್ ಬೀದಿಯಲ್ಲಿ ವಾಸಿಸುತ್ತಿದ್ದಂತ ಚಂದ್ರು ಆಟೋ ಚಾಲಕರಾಗಿ ಕೆಲಸ ಮಾಡ್ತಾ ಇದ್ದರು. ಇವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಗಮನಿಸಿದಂತ ನೆರೆಹೊರೆಯವರು ಸೇರಿದಂತೆ ಎಲ್ಲರೂ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಬೆಂಕಿ ಫ್ರಿಡ್ಜ್ ಗೂ ಹೊತ್ತಿಕೊಂಡಿದ್ದರಿಂದ ಅದರಲ್ಲಿದ್ದಂತ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ನಂದಿಸಲು ಬಂದಿದ್ದಂತ ಪಕ್ಕದ ಮನೆಯ ಮೊಹಮ್ಮದ್ ಉರ್ ಸೇರಿದಂತೆ ಮೂವರು ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

- Advertisement -

Latest News

error: Content is protected !!