Saturday, June 13, 2026
Homeಕರಾವಳಿಮಂಗಳೂರಿನಲ್ಲಿ ಗಲಭೆಗೆ ಸ್ಕೆಚ್: ಕಾರ್ಖಾನಾ ಗ್ಯಾಂಗ್ ನ ಮೂವರ ಬಂಧನ

ಮಂಗಳೂರಿನಲ್ಲಿ ಗಲಭೆಗೆ ಸ್ಕೆಚ್: ಕಾರ್ಖಾನಾ ಗ್ಯಾಂಗ್ ನ ಮೂವರ ಬಂಧನ

- Advertisement -
- Advertisement -

ಮಂಗಳೂರು: ಸಿಎಎ ಪ್ರತಿಭಟನೆ ಸಂದರ್ಭ ನಡೆದ ಗೋಲಿಬಾರ್ ಗೆ ಪ್ರತೀಕಾರವಾಗಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರಿನ ಬೋಳಾರದ ಇಬ್ರಾಹಿಂ ಶಾಕೀರ್ (19), ಕುದ್ರೋಳಿಯ ಅಕ್ಬರ್ (30) ಮತ್ತು ಮುಹಮ್ಮದ್ ಹನೀಫ್ (32) ಎಂದು ಗುರುತಿಸಲಾಗಿದ್ದು, ಇವರು ಕಾರ್ಖಾನಾ ಗ್ಯಾಂಗ್ ನ ಸದಸ್ಯರು ಎಂದು ತಿಳಿದು ಬಂದಿದೆ.


2019ರ ಡಿಸೆಂಬರ್ 19ರಂದು ಸಿಎಎ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಗೋಲಿಬಾರ್ ಗೆ ಇಬ್ಬರು ಸಾವನ್ನಪ್ಪಿದ್ದರು. ಗೋಲಿಬಾರ್ ಘಟನೆಗೆ ಪ್ರತಿಕಾರವಾಗಿ ಪೊಲೀಸರ ಮೇಲೆ ಮಾಯಾ ಗ್ಯಾಂಗ್ ಹಾಗೂ ಕಾರ್ಖಾನಾ ಗ್ಯಾಂಗ್ ಎಂಬ ಹೆಸರಿನ ದುಷ್ಕರ್ಮಿಗಳ ತಂಡ ದಾಳಿ ನಡೆಸಲು ಯೋಜನೆ ರೂಪಿಸಿದ್ದವು. ಅದರಂತೆ 2020ರ ಡಿಸೆಂಬರ್ 16ರಂದು ಮಂಗಳೂರಿನ ನ್ಯೂ ಚಿತ್ರಾ ಟಾಕೀಸ್ ಬಳಿಯ ಚೆಕ್​ಪೋಸ್ಟ್​ನಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿಯಲಾಗಿತ್ತು.

ಮಾಯಾ ಗ್ಯಾಂಗ್​​ ತಮ್ಮ ಟೀಂನಲ್ಲಿದ್ದ ಅಪ್ರಾಪ್ತರಿಗೆ ಮತ್ತೇರಿಸುವ ಮಾತ್ರೆಗಳನ್ನು ನೀಡಿ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು. ಆರಂಭದಲ್ಲಿ ಅಪ್ರಾಪ್ತ ಬಾಲಕ ಮತ್ತು ಮತ್ತೋರ್ವನನ್ನು ಬಂಧಿಸಲಾಗಿತ್ತು. ಬಳಿಕ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇಂದು ಮತ್ತೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.

- Advertisement -

Latest News

error: Content is protected !!