Friday, June 5, 2026
Homeತಾಜಾ ಸುದ್ದಿಭೀಕರ ರಸ್ತೆ ಅಪಘಾತ: ಮದುವೆಗೆ ಹೊರಟಿದ್ದ ಮದುಮಗಳು ಸೇರಿ ಒಂದೇ ಕುಟುಂಬದ 6 ಮಂದಿ ಸಾವು

ಭೀಕರ ರಸ್ತೆ ಅಪಘಾತ: ಮದುವೆಗೆ ಹೊರಟಿದ್ದ ಮದುಮಗಳು ಸೇರಿ ಒಂದೇ ಕುಟುಂಬದ 6 ಮಂದಿ ಸಾವು

- Advertisement -
- Advertisement -

ಹೈದರಾಬಾದ್: ಗೂಡೂರು ಮಂಡಲಂ ವ್ಯಾಪ್ತಿಯ ಮರ್ರಿಮಿಟ್ಟ ಗ್ರಾಮದ ಬಳಿ ಆಟೋ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 6 ಜನ ಸಾವನ್ನಪ್ಪಿದ್ದಾರೆ.

ಮದುವೆ ಬಟ್ಟೆ ಖರೀದಿಸಲು ತೆರಳಿದ್ದ ಮದುಮಗಳು ಪ್ರಮಿಳಾ ಸೇರಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು, ಆಟೋ ನುಜ್ಜುಗುಜ್ಜಾಗಿದೆ. ಮೃತರಲ್ಲಿ ಮೂವರು ಮಹಿಳೆಯರು. ಮೃತರು ಗುಂಡೂರು ಮಂಡಲಂ ಎರ್ರಕುಂಟಾ ತಾಂಡಾಗೆ ಸೇರಿದವರು ಎಂಬ ಮಾಹಿತಿಯಿದೆ.

ಅಪಘಾತ ಸಂಭವಿಸಿದ ವೇಳೇಯಲ್ಲಿ ಆಟೋದಲ್ಲಿ ಆರು ಮಂದಿ ಇದ್ದರು ಎನ್ನಲಾಗಿದ್ದು. ಘಟನ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

- Advertisement -

Latest News

error: Content is protected !!