Saturday, May 18, 2024
Homeತಾಜಾ ಸುದ್ದಿವಿಧಾನಪರಿಷತ್ ಕಲಾಪದಲ್ಲೇ ಕೂತು ಬ್ಲೂ ಫಿಲ್ಮ್ ನೋಡಿದ ಕಾಂಗ್ರೆಸ್​ ಎಂಎಲ್​ಸಿ

ವಿಧಾನಪರಿಷತ್ ಕಲಾಪದಲ್ಲೇ ಕೂತು ಬ್ಲೂ ಫಿಲ್ಮ್ ನೋಡಿದ ಕಾಂಗ್ರೆಸ್​ ಎಂಎಲ್​ಸಿ

spot_img
- Advertisement -
- Advertisement -

ಬೆಂಗಳೂರು: ವಿ.ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ನೀಲಿ ಚಿತ್ರ ವೀಕ್ಷಣೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಕನ್ನಡದ ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.

ಪ್ರಕಾಶ್ ರಾಥೋಡ್ ಅವರು ಇಂದು ವಿ.ಪರಿಷತ್‌ನಲ್ಲಿ ತಮ್ಮ ಮೊಬೈಲ್‌ ಅನ್ನು ತೆಗೆದುಕೊಂಡು ಗ್ಯಾಲರಿಗಳನ್ನು ನೋಡುತ್ತಿದ್ದ ವೇಳೇಯಲ್ಲಿ ಆಶ್ಲೀಲವಾದ ಫೋಟೋಗಳನ್ನು ನೋಡುತ್ತಿದ್ದರು ಅಂತ ಸುದ್ದಿವಾಹಿನಿ ವರದಿ ಮಾಡಿದೆ.

ಇಂದು ವಿಧಾನಪರಿಷತ್​ ಕಲಾಪ ನಡೆಯುತ್ತಿತ್ತು. ಕಾಂಗ್ರೆಸ್​ ಎಂಎಲ್​ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಡೀ ರಾಜ್ಯವನ್ನು ಪ್ರತಿನಿಧಿಸುವ ಶಾಸಕರುಗಳು ಕೂರುವ ಪ್ರಜಾ ದೇಗುಲದಲ್ಲಿ ಇಂತಹ ಅಸಹ್ಯ ವರ್ತನೆ ತೋರಿದ ಎಂಎಲ್​ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನೈತಿಕತೆಯ ಪ್ರಶ್ನೆಗೆ ಸ್ವತಃ ಆ ಎಂಎಲ್​ಸಿ ಜತೆಗೆ ಕಾಂಗ್ರೆಸ್​ ಪಕ್ಷದ ಮುಖಂಡರು ಸ್ಪಷ್ಟನೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

- Advertisement -
spot_img

Latest News

error: Content is protected !!