Tuesday, May 7, 2024
Homeತಾಜಾ ಸುದ್ದಿಸಚಿವರ ವಿರುದ್ಧ ಗಾಯಕಿ ಮಾಡಿದ್ದ ರೇಪ್​ಕೇಸ್​ಗೆ ಹೊಸ ತಿರುವು​- ಸಚಿವರನ್ನು ಕೆಳಗಿಳಿಸಲ್ಲ ಎಂದ ಸಿಎಂ

ಸಚಿವರ ವಿರುದ್ಧ ಗಾಯಕಿ ಮಾಡಿದ್ದ ರೇಪ್​ಕೇಸ್​ಗೆ ಹೊಸ ತಿರುವು​- ಸಚಿವರನ್ನು ಕೆಳಗಿಳಿಸಲ್ಲ ಎಂದ ಸಿಎಂ

spot_img
- Advertisement -
- Advertisement -

ಮುಂಬೈ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಎನ್‌ಸಿಪಿ ಪಕ್ಷದ ಹಿರಿಯ ಮುಖಂಡ ಹಾಗೂ ಮಹಾರಾಷ್ಟ್ರ ರಾಜ್ಯದ ಸಾಮಾಜಿಕ ನ್ಯಾಯ ಸಚಿವ ಧನಂಜಯ ಮುಂಢೆ ಅವರನ್ನು ಯಾವುದೇ ಕಾರಣಕ್ಕೂ ಸಂಪುಟದಿಂದ ಕೈಬಿಡಲಾಗದು ಎಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಸಚಿವರ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿರುವ ಗಾಯಕಿ ರೇಣು ಶರ್ಮಾ, ತಮ್ಮ ಪಕ್ಷದ ಕೆಲವರನ್ನು ಇದೇ ರೀತಿ ಸುಳ್ಳು ಆರೋಪ ಹೊರಿಸಿ, ಕಿರುಕುಳ ನೀಡಿದ್ದಾರೆಂದು ಬಿಜೆಪಿ ಮತ್ತು ಎಂಎನ್‌ಎಸ್‌ನ ಕೆಲವು ಮುಖಂಡರು ಆರೋಪಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಸಚಿವರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗಾಯಕಿ ರೇಣು ಶರ್ಮಾ, ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವೀಸ್​ ಅವರಿಗೆ ಪತ್ರ ಬರೆದಿದ್ದರು, ಇದೀಗ ನನಗೆ ಜೀವಬೆದರಿಕೆ ಇದೆ. ಪ್ರಭಾವ ಬಳಸಿ ಕಾಂಗ್ರೆಸ್​ ಸಚಿವ ಮುಂಡೆ ನನ್ನ ಜೀವಕ್ಕೆ ಅಪಾಯ ತಂದಿಟ್ಟಿದ್ದಾರೆ ಎಂದು ಗಾಯಕಿ ದೂರಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಂಡೆ, ಗಾಯಕಿ ಮಾಡಿರುವ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿದ್ದಾರೆ. 2003ರವರೆಗೂ ನಾನು ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದೆ, ನಮಗೆ ಇಬ್ಬರು ಮಕ್ಕಳಿದ್ದಾರೆ. ಮನೆಯವರೂ ಕೂಡ ನಮ್ಮಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದ್ದರು. ಇದೀಗ ಅಕ್ಕ-ತಂಗಿ ಸೇರಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

- Advertisement -
spot_img

Latest News

error: Content is protected !!