Wednesday, June 3, 2026
Homeತಾಜಾ ಸುದ್ದಿಬೆಂಗಳೂರಿಗೆ ಎಂಟ್ರಿ ಕೊಟ್ಟ ರೂಪಾಂತರಗೊಂಡ ಹೈಸ್ಪೀಡ್ ಕೊರೋನಾ ವೈರಸ್: ಇಂಗ್ಲೆಂಡ್ ನಿಂದ ಬಂದ ಇಬ್ಬರಿಗೆ ಸೋಂಕು...

ಬೆಂಗಳೂರಿಗೆ ಎಂಟ್ರಿ ಕೊಟ್ಟ ರೂಪಾಂತರಗೊಂಡ ಹೈಸ್ಪೀಡ್ ಕೊರೋನಾ ವೈರಸ್: ಇಂಗ್ಲೆಂಡ್ ನಿಂದ ಬಂದ ಇಬ್ಬರಿಗೆ ಸೋಂಕು ದೃಢ

- Advertisement -
- Advertisement -

ಬೆಂಗಳೂರು: ಕೊರೊನಾ ಆಘಾತದಿಂದ ಹೊರ ಬರುವ ಮೊದಲೇ ಇದೀಗ ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್  ಸುದ್ದಿ ಎದುರಾಗಿದೆ. ಬೆಂಗಳೂರಿನಲ್ಲಿ ರೂಪಾಂತರಗೊಂಡ ಹೈಸ್ಪೀಡ್ ಕೊರೋನಾ ವೈರಸ್ ಪತ್ತೆಯಾಗಿದೆ.

ಹೌದು.. ಇಂಗ್ಲೆಂಡ್‌ನಿಂದ ವಾಪಸ್ ಆಗಿರುವ ಬೆಂಗಳೂರು ಮೂಲದ ಇಬ್ಬರಲ್ಲಿ ಹೈಸ್ಪೀಡ್ ಕೊರೋನಾ ವೈರಸ್ ಪತ್ತೆಯಾಗಿದೆ. ಇದು ಸಿಲಿಕಾನ್ ಸಿಟಿ ಮಂದಿಯನ್ನು ಬೆಚ್ಚಿ ಬೀಳಿಸಿದೆ.

ಇದೇ ಕಾರಣದಿಂದಾಗಿ ಹೈ ಅಲರ್ಟ್ ಆಗಿರುವ ರಾಜ್ಯ ಆರೋಗ್ಯ ಇಲಾಖೆ, ಇಂಗ್ಲೆಂಡ್ ನಿಂದ ಬಂದ 138 ಮಂದಿ ಪ್ರಯಾಣಿಕರ ಪತ್ತೆಗಾಗಿ ಆಪರೇಷನ್ ಶುರು ಮಾಡಿದೆ. ಇತ್ತೀಚೆಗೆ ಯುಕೆಯಿಂದ 138 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರೆಲ್ಲರೂ ಕೊರೋನಾ ಹೊಸ ತಳಿಯ ಪರೀಕ್ಷೆ ಮಾಡಿಸದೇ ಬೆಂಗಳೂರು ಮೂಲಕ ರಾಜ್ಯಕ್ಕೆ ಆಗಮಿಸಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಅವರ ಕಾಂಟ್ಯಾಕ್ಟ್ ಮಾಹಿತಿಯನ್ನು ಪಡೆಯುತ್ತಿರುವಂತ ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆಗೂಡಿ, ಅವರ ಪತ್ತೆಗೆ ಇಳಿದಿದೆ. ಅದರಂತೆ ಇದೀಗ ಇಬ್ಬರಲ್ಲಿ ಸೋಂಕು ಇರೋದು ಪತ್ತೆಯಾಗಿದೆ

- Advertisement -

Latest News

error: Content is protected !!