Monday, June 8, 2026
Homeತಾಜಾ ಸುದ್ದಿಹಣದಾಸೆಗೆ ಪಡಿತರ ಕಾರ್ಡ್ ಅಕ್ಕಿ ಮಾರಿದರೆ ಹುಷಾರ್-6 ತಿಂಗಳು ಕಾರ್ಡ್‌ಗಳು ರದ್ದು, ದಂಡ ವಸೂಲಿ!..

ಹಣದಾಸೆಗೆ ಪಡಿತರ ಕಾರ್ಡ್ ಅಕ್ಕಿ ಮಾರಿದರೆ ಹುಷಾರ್-6 ತಿಂಗಳು ಕಾರ್ಡ್‌ಗಳು ರದ್ದು, ದಂಡ ವಸೂಲಿ!..

- Advertisement -
- Advertisement -

ಬೆಂಗಳೂರು: ಪಡಿತರ ಕಾರ್ಡ್ ಮೂಲಕ ಅನ್ನಭಾಗ್ಯ ಯೋಜನೆಯಡಿ ಸಿಗುವ ಪಡಿತರವನ್ನು ಹಣದಾಸೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರ ಹೊಸ ಆದೇಶ ಹೊರಡಿಸಿದೆ.ಆಹಾರ ಇಲಾಖೆ ಆದೇಶ ಪ್ರಕಾರ ಪಡಿತರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸಿಕ್ಕಿಬಿದ್ದರೆ ಫಲಾನುಭವಿಗಳು ಹೊಂದಿರುವ ಕಾರ್ಡ್‌ಗಳು ರದ್ದು ಮಾಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯಡಿ ಸಿಗುವ ಪಡಿತರವನ್ನು ಹಣದಾಸೆಗೆ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸಿಕ್ಕಿಬಿದ್ದರೆ ಫಲಾನುಭವಿಗಳು ಹೊಂದಿರುವ ಕಾರ್ಡ್‌ಗಳು 6 ತಿಂಗಳು ರದ್ದು ಮಾಡಲಾಗುತ್ತದೆ. ಅಲ್ಲದೆ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ ಎಂದು ಇಲಾಖೆ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

- Advertisement -

Latest News

error: Content is protected !!