Friday, June 5, 2026
Homeಕರಾವಳಿಬಿ.ಸಿ.ರೋಡಿನಲ್ಲೊಂದು ಹೃದಯ ವಿದ್ರಾವಕ ಘಟನೆ- ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮೂರುದಿನದ ಕಂದಮ್ಮ!..

ಬಿ.ಸಿ.ರೋಡಿನಲ್ಲೊಂದು ಹೃದಯ ವಿದ್ರಾವಕ ಘಟನೆ- ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮೂರುದಿನದ ಕಂದಮ್ಮ!..

- Advertisement -
- Advertisement -

ಬಿ.ಸಿ.ರೋಡು: ಇಲ್ಲಿನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಗೂಡಿನಬಳಿ ನಿವಾಸಿಯೋರ್ವರ ಆಟೋ ರಿಕ್ಷಾ ಉರುಳಿ ಬಿದ್ದು ೩ ದಿನದ ಹಸುಗೂಸು ಮೃತಪಟ್ಟಿದೆ. ಚಾಲಕ ಸಹಿತ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗುರುಪುರ – ಕೈಕಂಬ ಮೂಲದ ಉಮೈರಾ ಎಂಬವರು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬಿ.ಸಿ.ರೋಡ್ ಕಡೆ ಬರುವ ಖಾಲಿ ಆಯಂಬುಲೆನ್ಸ್ ನಲ್ಲಿ ಬಂದು ಬಿ.ಸಿ.ರೋಡು – ಕೈಕಂಬದಲ್ಲಿ ಇಳಿದು ಅಲ್ಲಿಂದ ಗೂಡಿನಬಳಿ ನಿವಾಸಿಯೋರ್ವರ ಆಟೋ ರಿಕ್ಷಾದಲ್ಲಿ ಮನೆ ಕಡೆಗೆ ತೆರಳುವ ವೇಳೆ ಘಟನೆ ನಡೆದಿದೆ.ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ತಲುಪಿದಾಗ ಚಾಲಕನ ನಿಯಂತ್ರಣದ ತಪ್ಪಿ ಆಟೊ ರಿಕ್ಷಾ ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆಯಿಂದ ತಾಯಿಯ ಮಡಿಲಲ್ಲಿದ್ದ ಹಸುಗೂಸು ಹೊರಗೆಸೆಯಲ್ಪಟ್ಟು ಸಾವನ್ನಪ್ಪಿದೆ.

- Advertisement -

Latest News

error: Content is protected !!