- Advertisement -
![]()
- Advertisement -
ಪುತ್ತೂರು: ಎರಡು ದಿನಗಳ ಹಿಂದಯಷ್ಟೇ ಪುತ್ತೂರು ನಗರ ಠಾಣೆ ಪೊಲೀಸರು ಅಂತರಾಜ್ಯ ಡ್ರಗ್ಸ್ ಸಾಗಾಟ ಜಾಲದ ನಾಲ್ವರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣವನ್ನು ಪುತ್ತೂರು ನಗರ ಠಾಣೆ ಪೊಲೀಸರು ನಿನ್ನೆ ಭೇದಿಸಿದ್ದಾರೆ.
ಪುತ್ತೂರಿನ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆಟೋ ರಿಕ್ಷಾವನ್ನು ತಡೆ ಹಿಡಿದ ಪೊಲೀಸರು ಅದರಲ್ಲಿದ್ದ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರಿನ ಮಂಜನಾಡಿ ಕುಚ್ಚಿಗುಡ್ಡೆ ನಿವಾಸಿ ಹಾತಿಮ್ (39) ಬಂಧಿತ ಆರೋಪಿ.
ಇನ್ನು ಬಂಧಿತನಿಂದ 42,600 ರೂ ಮೌಲ್ಯದ 2.13 ಕಿ.ಗ್ರಾಂ ಗಾಂಜಾ, 5 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ,5900 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾವನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ
- Advertisement -


