Thursday, June 4, 2026
Homeಕರಾವಳಿಸುಳ್ಯ:"ಬಲೆ ತುಲು ಲಿಪಿ ಕಲ್ಪುಗ" ಕಾರ್ಯಗಾರದ ಸಮಾರೋಪ ಕಾರ್ಯಕ್ರಮ

ಸುಳ್ಯ:”ಬಲೆ ತುಲು ಲಿಪಿ ಕಲ್ಪುಗ” ಕಾರ್ಯಗಾರದ ಸಮಾರೋಪ ಕಾರ್ಯಕ್ರಮ

- Advertisement -
- Advertisement -

ಸುಳ್ಯ:ಇಲ್ಲಿನ ನೆಟ್ಟಾರ್ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಸಭಾಭವನದಲ್ಲಿ “ಬಲೆ ತುಲು ಲಿಪಿ ಕಲ್ಪುಗ” ಕಾರ್ಯಗಾರದ ಸಮಾರೋಪ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.) ಅಕ್ಷಯ ಯುವಕ ಮಂಡಲ (ರಿ.) ನೆಟ್ಟಾರ್ ಮತ್ತು ಅಕ್ಷತಾ ಮಹಿಳಾ ಮಂಡಲ ನೆಟ್ಟಾರ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿ, ಜೆ.ಸಿ.ಐ ಬೆಳ್ಳಾರೆಯ ಪೂರ್ವಾಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ರೈ ಪನ್ನೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತುಳು ಲಿಪಿ, ತುಳು ಭಾಷೆಯ ಬೆಳವಣಿಗೆಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು, ಈ ನಿಟ್ಟಿನಲ್ಲಿ ಸಂಘಟನೆಗಳು ಕೂಡಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.

ಜೈ ತುಲುನಾಡ್ (ರಿ.) ಸಂಘಟನೆಯ ಮಾಜಿ ಉಪಾಧ್ಯಕ್ಷ ಶ್ರೀ ಯತೀಶ್ ಪುತ್ತೂರು ಮಾತನಾಡಿ ತುಳುವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತುಳುವರು ಮೆಟ್ಟಿ ನಿಲ್ಲಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಶ್ರೀ ವೆಂಕಟರಮಣ ಗೌಡ ತುಳು ಲಿಪಿ ಪರೀಕ್ಷೆ ಬರೆದು ಉತ್ತೀರ್ಣಗೊಂಡವರಿಗೆ ಪ್ರಮಾಣಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ತುಳು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ ರಿಗೆ ಆಯೋಜಕರ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಉಷಾ ಯೋಗೀಶ್, ಅಕ್ಷತಾ ಮಹಿಳಾ ಮಂಡಲದ ಅಧ್ಯಕ್ಷೆ ನಳಿನಿ ಕಜೆ, ತುಳು ಲಿಪಿ ಶಿಕ್ಷಕ ನಿಶ್ಚಿತ್ ರಾಮಕುಂಜ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೈ ತುಲುನಾಡ್ (ರಿ.) ಸಂಘಟನೆಯ ವತಿಯಿಂದ ಮುಂಬರುವ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಸಾಧ್ಯವಾದಷ್ಟು ತುಳು ಭಾಷೆ, ತುಳು ಲಿಪಿಯನ್ನು ಬಳಸಬೇಕೆಂದು ಅಕ್ಷಯ ಯುವಕ ಮಂಡಲ ಹಾಗೂ ಅಕ್ಷತಾ ಮಹಿಳಾ ಮಂಡಲದವರಲ್ಲಿ ವಿನಂತಿಸಲಾಯಿತು.

- Advertisement -

Latest News

error: Content is protected !!