Monday, June 8, 2026
Homeತಾಜಾ ಸುದ್ದಿಉಸ್ಮಾನಿಯಾ ವಿಶ್ವವಿದ್ಯಾಲಯದ ಮೇಲೆ ಅತಿಕ್ರಮಣಕ್ಕೆ ಯತ್ನ- ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು!..

ಉಸ್ಮಾನಿಯಾ ವಿಶ್ವವಿದ್ಯಾಲಯದ ಮೇಲೆ ಅತಿಕ್ರಮಣಕ್ಕೆ ಯತ್ನ- ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು!..

- Advertisement -
- Advertisement -

ಹೈದರಾಬಾದ್​:ಇಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಮೇಲೆ ಅತಿಕ್ರಮಣ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್​ನಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ತೇಜಸ್ವಿ ಸೂರ್ಯ ಬಿಜೆಪಿ ಪರ ಪ್ರಚಾರಕ್ಕೆ ಹೈದರಾಬಾದ್​ ಗೆ ತೆರಳಿದ್ದ ವೇಳೆ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ತೇಜಸ್ವಿ ಸೂರ್ಯ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ತೆರಳದಂತೆ ಪ್ರವೇಶದ್ವಾರದಲ್ಲಿ ಬೇಲಿ ಹಾಕಿ ಸಂಸದರನ್ನು ತಡೆಯಲಾಗಿತ್ತು. ಆದರೆ ಸುಮ್ಮನಾಗದ ತೇಜಸ್ವಿ ಮತ್ತು ಅವರ ಬೆಂಬಲಿಗರು ಬೇಲಿಯನ್ನು ತೆರವುಗೊಳಿಸಿ ವಿವಿ ಪ್ರವೇಶಿಸಿದ್ದು ಈಗ ಪ್ರಕರಣ ದಾಖಲಾಗಿದೆ. ವಿವಿಗೆ ನುಗ್ಗಿರುವ ತೇಜಸ್ವಿ ಸೂರ್ಯ ಮತ್ತು ಅವರ ಬೆಂಬಲಿಗರ ನಡೆಯನ್ನು ಖಂಡಿಸಿರುವ ವಿಶ್ವವಿದ್ಯಾಲಯ ದೂರು ದಾಖಲಿಸಿದೆ.

- Advertisement -

Latest News

error: Content is protected !!