Wednesday, June 3, 2026
Homeತಾಜಾ ಸುದ್ದಿಯುವತಿಯ ಅಂಗಾಂಗ ಕತ್ತರಿಸಿ ಭೀಕರ ಕೊಲೆ-ಹೇಮಾವತಿ ನದಿಯಲ್ಲಿ ಪತ್ತೆಯಾಯ್ತು ಅಪರಿಚಿತ ಯುವತಿಯ ಛಿದ್ರಗೊಂಡ ದೇಹ!..

ಯುವತಿಯ ಅಂಗಾಂಗ ಕತ್ತರಿಸಿ ಭೀಕರ ಕೊಲೆ-ಹೇಮಾವತಿ ನದಿಯಲ್ಲಿ ಪತ್ತೆಯಾಯ್ತು ಅಪರಿಚಿತ ಯುವತಿಯ ಛಿದ್ರಗೊಂಡ ದೇಹ!..

- Advertisement -
- Advertisement -

ಮಂಡ್ಯ:ಇಲ್ಲಿನ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆಯಲ್ಲಿ ಮಹಿಳೆಯ ಅಂಗಾಂಗಗಳನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿ ನದಿಗೆ ಎಸೆದಿರುವ ಘಟನೆ ವರದಿಯಾಗಿದೆ.ಹೇಮಾವತಿ ದಡದಲ್ಲಿರುವ ವಿದ್ಯುತ್ ಸ್ಥಾವರ ಘಟಕದ ಸಮೀಪ ನದಿಯಲ್ಲಿ ಅಪರಿಚಿತ ಯುವತಿಯ ದೇಹ, ತಲೆ ಮತ್ತು ಅಂಗಾಂಗಗಳು ಪತ್ತೆಯಾಗಿವೆ.

ದುಷ್ಕರ್ಮಿಗಳು ವಿಕೃತವಾಗಿ ಕೊಲೆ ಮಾಡಿದ್ದು ಕೊಲೆಗೆ ಕಾರಣ ಹಾಗೂ ಯುವತಿಯ ಗುರುತು ಪತ್ತೆಯಾಗಿಲ್ಲ.ಮೊದಲು ಸ್ಥಳೀಯರಿಗೆ ದೇಹ ಮಾತ್ರ ಕಂಡು ಬಂದಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ‌ ಬಿಡಿಭಾಗಗಳನ್ನು ಶೋಧ ನಡೆಸಿದ್ದಾರೆ. ಕೃತ್ಯ ಎರಡು ದಿನಗಳ ಹಿಂದೆ ನಡೆದಿರಬಹುದು ಎಂದು ಶಂಕೆ‌ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!