Thursday, June 4, 2026
Homeತಾಜಾ ಸುದ್ದಿದೀಪಾವಳಿಯ ದೀಪಗಳ ಬೆಳಕಿನ ಮಧ್ಯೆಅಮಾನುಷ ಘಟನೆ- ಪತ್ನಿಯನ್ನು ಕೊಲೆ ಮಾಡಿ ಸುಟ್ಟುಹಾಕಿದ ಕೀಚಕ!..

ದೀಪಾವಳಿಯ ದೀಪಗಳ ಬೆಳಕಿನ ಮಧ್ಯೆಅಮಾನುಷ ಘಟನೆ- ಪತ್ನಿಯನ್ನು ಕೊಲೆ ಮಾಡಿ ಸುಟ್ಟುಹಾಕಿದ ಕೀಚಕ!..

- Advertisement -
- Advertisement -

ಮೈಸೂರು: ದೀಪಾವಳಿಯ ದೀಪಗಳ ಬೆಳಕಿನ ಮಧ್ಯೆ ಮೈಸೂರಿನಲ್ಲೊಂದು ಅಮಾನುಷ ಘಟನೆ ನಡೆದಿದೆ.ಗಂಡನೊಬ್ಬ ದೀಪಾವಳಿ ದಿನವೇ ಪತ್ನಿಯನ್ನು ಕೊಲೆ ಮಾಡಿ ಸೀಮೆಎಣ್ಣೆ ಸುರಿದು ಮೃತದೇಹವನ್ನು ಸುಟ್ಟುಹಾಕಿದ ಘಟನೆ ನಡೆದಿದೆ.ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ದೊಡ್ಡಮುಲಗೂಡು ಗ್ರಾಮದಲ್ಲಿ ಘಟನೆ ವರದಿಯಾಗಿದ್ದು 30 ವರ್ಷದ ರಮೇಶ್ ಎಂಬಾತ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ದೊಡ್ಡಮುಲಗೂಡು ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದ ರಮೇಶ್ ತನ್ನ ಹೆಂಡತಿ 22 ವರ್ಷದ ಶಾಂತಮ್ಮನನ್ನು ಕೊಲೆ ಮಾಡಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!