Thursday, June 4, 2026
Homeತಾಜಾ ಸುದ್ದಿಭಾರತೀಯ ಕ್ರಿಕೆಟ್ ತಂಡ ಕ್ವಾರಂಟೈನ್‌ನಲ್ಲಿರುವ ಸಿಡ್ನಿ ಒಲಿಂಪಿಕ್ ಪಾರ್ಕ್ ಬಳಿ ವಿಮಾನ ಅಪಘಾತ- ತಪ್ಪಿದ ಭಾರಿ...

ಭಾರತೀಯ ಕ್ರಿಕೆಟ್ ತಂಡ ಕ್ವಾರಂಟೈನ್‌ನಲ್ಲಿರುವ ಸಿಡ್ನಿ ಒಲಿಂಪಿಕ್ ಪಾರ್ಕ್ ಬಳಿ ವಿಮಾನ ಅಪಘಾತ- ತಪ್ಪಿದ ಭಾರಿ ದುರಂತ!..

- Advertisement -
- Advertisement -

ಸಿಡ್ನಿ: ಭಾರತೀಯ ಕ್ರಿಕೆಟ್ ತಂಡ ಸಿಡ್ನಿ ಒಲಿಂಪಿಕ್ ಪಾರ್ಕ್ ನಲ್ಲಿ ಕ್ವಾರಂಟೈನ್‌ನಲ್ಲಿದೆ. ಆದರೆ ಇಲ್ಲಿಂದ 30 ಕಿಲೋಮೀಟರ್ ದೂರದ ಆಟದ ಮೈದಾನವೊಂದರಲ್ಲಿ ಲಘು ವಿಮಾನ ಅಪಘಾತಕ್ಕೀಡಾಗಿದೆ. ಶನಿವಾರ ಕ್ರೋಮರ್ ಪಾರ್ಕ್ ಮೈದಾನದಲ್ಲಿ ಕ್ರಿಕೆಟ್ ಹಾಗೂ ಫುಟ್ಬಾಲ್ ಆಡುತ್ತಿದ್ದಾಗ ವಿಮಾನ ಅಪಘಾತಕ್ಕೀಡಾಗಿದೆ. ಇದರಿಂದ ಭೀತಿಗೊಂಡ ಸ್ಥಳೀಯ ಕ್ರಿಕೆಟ್ ಮತ್ತು ಫುಟ್ಬಾಲ್ ಆಟಗಾರರು ಮೈದಾನ ಬಿಟ್ಟು ಓಡಿಹೋದರು.

ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾಗ ವಿಮಾನ ಪತನವಾಯಿತು ಎನ್ನಲಾಗಿದೆ. ಮೈದಾನದ ಸಮೀಪಕ್ಕೆ ವಿಮಾನ ಬರುತ್ತಿದ್ದಂತೇ ಗಾಬರಿಯಾದ ಆಟಗಾರರು ಚಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ.ಕ್ರೀಡಾಶೆಡ್ ಮೇಲೆ ವಿಮಾನ ಪತನವಾಗುವುದನ್ನು ಪೈಲಟ್ ತಪ್ಪಿಸಿದರಾದರೂ ಮೈದಾನದಲ್ಲಿ ವಿಮಾನ ಪತನ ಕಂಡಿದೆ. ಈ ಲಘುವಿಮಾನ ವಿಮಾನಯಾನ ತರಬೇತಿ ಶಾಲೆಗೆ ಸೇರಿದ್ದು ಇಬ್ಬರು ಪೈಲಟ್ ಗಳಿದ್ದರು.ಇಬ್ಬರಿಗೂ ಗಾಯಗಳಾಗಿವೆ ಎಂದು ಮೂಲಗಳು ಹೇಳಿವೆ. ವಾಯುಮಧ್ಯದಲ್ಲಿ ಎಂಜಿನ್ ದೋಷ ಕಾಣಿಸಿಕೊಂಡಿದ್ದರಿಂದ ಈ ಅಪಘಾತ ಸಂಭವಿಸಿದೆ.

- Advertisement -

Latest News

error: Content is protected !!