Monday, June 8, 2026
Homeಕರಾವಳಿಉಡುಪಿಉಡುಪಿಯಲ್ಲಿ ವೈದ್ಯಕೀಯ ಪದವಿಯಿಲ್ಲದೆ ಡೆಂಟಲ್‌ ಕ್ಲಿನಿಕ್‌ ನಡೆಸುತ್ತಿದ್ದ ನಕಲಿ ದಂತ ವೈದ್ಯೆ!..ಆರೋಗ್ಯ ಇಲಾಖೆಯಿಂದ ದಾಳಿ

ಉಡುಪಿಯಲ್ಲಿ ವೈದ್ಯಕೀಯ ಪದವಿಯಿಲ್ಲದೆ ಡೆಂಟಲ್‌ ಕ್ಲಿನಿಕ್‌ ನಡೆಸುತ್ತಿದ್ದ ನಕಲಿ ದಂತ ವೈದ್ಯೆ!..ಆರೋಗ್ಯ ಇಲಾಖೆಯಿಂದ ದಾಳಿ

- Advertisement -
- Advertisement -

ಉಡುಪಿ: ಉಡುಪಿ ಸಿಟಿ ನಿಲ್ದಾಣದಲ್ಲಿ ಶ್ವೇತಾ ಎಂಬುವವರಿಗೆ ಸೇರಿದ ಶಾಶ್ವತ್‌‌ ಡೆಂಟಲ್‌‌ ಕ್ಲಿನಿಕ್‌‌‌‌ ಲ್ಯಾಬ್‌‌‌‌‌ ಹೆಸರಿನ ವೈದ್ಯಕೀಯ ಸಂಸ್ಥೆಯಿದ್ದು ಇದನ್ನು ನಡೆಸಲು ಅನುಮತಿ ನೀಡಲಾಗಿತ್ತು. ಅದರೇ ಈಕೆ ವೈದ್ಯಕೀಯ ಪದವಿ ಹೊಂದಿಲ್ಲದ ರಾಧಾ ಗೋವಿಂದ ಭಂಡಾರಿ ಎನ್ನುವವರಿಗೆ ಕ್ಲಿನಿಕ್‌‌‌‌‌ ನಿರ್ವಹಿಸಲು ಅವಕಾಶ ನೀಡಿದ್ದರು.

ಇದನ್ನರಿತ ಆರೋಗ್ಯ ಇಲಾಖೆಯ ಅಧಿಕಾರಿಗಳು ಡೆಂಟಲ್‌‌ ಕ್ಲಿನಿಕ್ ಗೆ ದಾಳಿ ನಡೆಸಿ ಸೀಲ್‌ ಮಾಡಿದ್ದಾರೆ. ನಕಲಿ ದಂತ ವೈದ್ಯೆಯೊಬ್ಬರು ಡೆಂಟಲ್‌ ಕ್ಲಿನಿಕ್‌ ಲ್ಯಾಬ್‌ ಅನ್ನು ನಡೆಸುತ್ತಿರುವ ಬಗ್ಗೆ ಆರೋಪಿಗಳು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗರತ್ನ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!