Saturday, June 6, 2026
Homeಕರಾವಳಿಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಚಿವ ಸಿ.ಟಿ.ರವಿ ಭೇಟಿ - ಬೆಳ್ತಂಗಡಿ ಕಾಳಜಿ ಫ್ಲಡ್ ರಿಲೀಫ್ ಫಂಡ್...

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಚಿವ ಸಿ.ಟಿ.ರವಿ ಭೇಟಿ – ಬೆಳ್ತಂಗಡಿ ಕಾಳಜಿ ಫ್ಲಡ್ ರಿಲೀಫ್ ಫಂಡ್ ನಿಂದ 299 ಸಂತ್ರಸ್ಥರಿಗೆ ಸಚಿವರಿಂದ ಸಹಾಯಧನ ಹಸ್ತಾಂತರ

- Advertisement -
- Advertisement -

ಬೆಳ್ತಂಗಡಿ: ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಅವರು ಭೇಟಿ ನೀಡಿದರು.ಅವರು ವಿಶೇಷ ಪೂಜೆ ಸಲ್ಲಿಸಿ, ಮಂಜುನಾಥ ಸ್ವಾಮಿ ದರ್ಶನ ಪಡೆದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಆಶೀರ್ವಾದ ಪಡೆದು ಸವಾದ ನಡೆಸಿದರು.

ಸಚಿವರು ಬೆಳ್ತಂಗಡಿ ಕಾಳಜಿ ಫ್ಲಡ್ ರಿಲೀಫ್ ಫಂಡ್ ನಿಂದ ಕಳೆದ ಬಾರಿ ನೆರೆ ಬಂದು ಮನೆ ಕಳೆದುಕೊಂಡ 299 ಸಂತ್ರಸ್ತರಿಗೆ ಸಹಾಯಧನದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿಬಳಿಕ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸಚಿವರನ್ನು ಕ್ಷೇತ್ರದ ವತಿಯಿಂದ ಡಾ.ಹೆಗ್ಗಡೆ ಬರಮಾಡಿಕೊಂಡು ಸ್ವಾಗತಿಸಿದರು. ಈ ವೇಳೆ ಹೇಮಾವತಿ ವೀ.ಹೆಗ್ಗಡೆ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತಿತರ ಹಲವು ಗಣ್ಯರು ಭಾಗವಹಿಸಿದರು.

- Advertisement -

Latest News

error: Content is protected !!