Sunday, June 7, 2026
Homeತಾಜಾ ಸುದ್ದಿವರ್ಕ್ ಫ್ರಮ್ ಹೋಮ್ ಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಟೆಕ್ಕಿ

ವರ್ಕ್ ಫ್ರಮ್ ಹೋಮ್ ಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಟೆಕ್ಕಿ

- Advertisement -
- Advertisement -

ಸೂರತ್ :ಕೊರೊನಾದಿಂದಾಗಿ ಬಹುತೇಕ ಎಲ್ಲಾ ಸಾಫ್ಟೇ ವೇರ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡಿಸುತ್ತಿದೆ.ಮನೆಯಿಂದ ಕೆಲಸ ಮಾಡುತ್ತಿದ್ದರೂ ಅವರಿಗೆ ಒತ್ತಡ ಮಾತ್ರ ಕಮ್ಮಿಯಾಗಿಲ್ಲ. ಇದೇ ರೀತಿ ಕೆಲಸದ ಒತ್ತಡಕ್ಕೆ ಬೇಸತ್ತು ಗುಜರಾತ್‍ನ ಸೂರತ್‍ನಲ್ಲಿ ವರ್ಕ್ ಫ್ರಮ್ ಹೋಮ್‍ ಮಾಡುತ್ತಿದ್ದ ಟೆಕ್ಕಿ ಕೆಲಸದ ಒತ್ತಡ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

32 ವರ್ಷದ ಎಂಜಿನಿಯರ್ ಜಿಗರ್ ಗಾಂಧಿ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದು, ಕಳೆದ 3 ವರ್ಷಗಳಿಂದ ನೋಡ್ಡಾ ಸೇರಿದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.ಕೊರೊನಾ ಕಾರಣದಿಂದ ತನ್ನ ನಿವಾಸಕ್ಕೆ ಕಳೆದ 2 ತಿಂಗಳ ಹಿಂದೆ ವಾಪಸ್ ಆಗಿದ್ದ ಟೆಕ್ಕಿ, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಕುಟುಂಬಸ್ಥರು ಡಿಸೆಂಬರ್ ನಲ್ಲಿ ಅವರಿಗೆ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮಾನಸಿಕ ತಜ್ಞರು, ವರ್ಕ್ ಫ್ರಮ್ ಹೋಮ್ ಹೆಚ್ಚು ದಿನ ಮುಂದುವರಿದರೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಅಂತಹ ವ್ಯಕ್ತಿಗಳನ್ನು ಮೊದಲೇ ಗುರುತಿಸಿ ತಜ್ಞ ವೈದ್ಯರ ಸಲಹೆ ಪಡೆಯವುದು ಉತ್ತಮ ಎಂದಿದ್ದಾರೆ.

- Advertisement -

Latest News

error: Content is protected !!