Thursday, June 4, 2026
Homeತಾಜಾ ಸುದ್ದಿತಂದೆಯನ್ನೇ ಹೊಡೆದು ಕೊಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಬಾಲಕಿ

ತಂದೆಯನ್ನೇ ಹೊಡೆದು ಕೊಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಬಾಲಕಿ

- Advertisement -
- Advertisement -

ಚಂಢೀಗಡ: ಬಾಲಕಿಯೊಬ್ಬಳು ತನ್ನ ತಂದೆಯನ್ನೇ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಕರೆ ಮಾಡಿ ತಿಳಿಸಿ ತಾನೇ ಶರಣಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪ್ರತಿ ದಿನ ತಂದೆ ಕುಡಿದು ಬಂದು ತಾಯಿ ಮೇಲೆ ಹಲ್ಲೆ ಮಾಡುತ್ತಿದ್ದನು. ಇದರಿಂದ ನೊಂದ ಬಾಲಕಿ ಬ್ಯಾಟ್ ನಿಂದ ತಂದೆಯನ್ನೇ ಹೊಡೆದು ಹತ್ಯೆ ಮಾಡಿದ್ದಾಳೆ. ತನ್ನ ತಂದೆಯನ್ನು ಕೊಲೆ ಮಾಡಿದ ಬಳಿಕ ಆಕೆ 100ಗೆ ಕರೆ ಮಾಡಿದ್ದಾಳೆ. ಅಲ್ಲದೆ ಪೊಲೀಸರಿಗೆ ಶರಣಾಗಿದ್ದಾಳೆ.

ಬಾಲಕಿಯ ತಂದೆ ನಿರುದ್ಯೋಗಿಯಾಗಿದ್ದು, ಹಿರಿಯ ಮಗನನ್ನು ಅವಲಂಬಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿನಿತ್ಯ ಮದ್ಯ ಸೇವಿಸಿ ಬಂದು ತಾಯಿಗೆ ತಂದೆ ಹೊಡೆಯುತ್ತಿದ್ದರು ಎಂದು ಬಾಲಕಿ ಆರೋಪ ಮಾಡಿದ್ದಾಳೆ.

ಘಟನೆ ನಡೆದ ದಿನ ಬಾಲಕಿಯ ಕುಟುಂಬ ಹಿರಿಯ ಮಗನ ಮದುವೆ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಬಾಲಕಿಯ ತಂದೆ ಜಗಳವಾಡಲು ಪಾರಂಭಿಸಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಬ್ಯಾಟ್ ಎತ್ತಿಕೊಂಡು ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಪರಿಣಾಮ ತೀವ್ರ ರಕ್ತಸ್ತಾವವಾಗಿ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!